ನವದೆಹಲಿ: ಗುರುವಾರ ನವದೆಹಲಿಯಲ್ಲಿ ಬಿಡುಗಡೆಯಾದ ವಾರ್ಷಿಕ ಡಾಟಾ ಆನ್ ಪೋಲಿಸ್ ಆರ್ಗನೈಸೇಷನ್ಸ್ (DoPO) ಪ್ರಕಾರ, ದೇಶದ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳಲ್ಲಿ ಮಹಿಳಾ ಸಿಬ್ಬಂದಿಗಳ ಸಾಮರ್ಥ್ಯ ಶೇ. 21 ರಷ್ಟು ಹೆಚ್ಚಳವಾಗಿದೆ.
ವರದಿಯ ಪ್ರಕಾರ, ಭಾರತದಲ್ಲಿನ ಒಟ್ಟು ಪೊಲೀಸ್ ಪಡೆಗಳಲ್ಲಿ ಮಹಿಳಾ ಪೊಲೀಸರು ಈಗ ಶೇಕಡಾ 8.73 ರಷ್ಟಿದ್ದಾರೆ. DoPOವು ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ (BPR&D) ಯ ಪ್ರಮುಖ ಪ್ರಕಟಣೆಯಾಗಿದೆ.
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ಗುರುವಾರ DoPO ಅನ್ನು ಬಿಡುಗಡೆ ಮಾಡಿದ್ದಾರೆ.
“ಮಹಿಳಾ ಪೊಲೀಸರ ಸಾಮರ್ಥ್ಯದಲ್ಲಿ ಶೇಕಡಾ 20.95 ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯ ಪೊಲೀಸ್ ಪಡೆಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆಯನ್ನು 1,69,550 ಕ್ಕೆ ಏರಿಸಿದೆ. ಇದು ಭಾರತೀಯ ಪೊಲೀಸ್ ಪಡೆಯಲ್ಲಿ ಮಹಿಳೆಯರ ಒಟ್ಟು ಪ್ರಮಾಣವನ್ನು ಶೇಕಡಾ 8.73 ಕ್ಕೆ ತರುತ್ತದೆ” ಎಂದು ರೆಡ್ಡಿ ಹೇಳಿದ್ದಾರೆ.
ವರದಿಯ ಪ್ರಕಾರ, 2017 ಮತ್ತು 2018 ರ ನಡುವೆ, ರಾಜ್ಯ ಪೊಲೀಸ್ ಪಡೆಗಳ ಅನುಮೋದಿತ ಬಲದಲ್ಲಿ 19,686 ಪೊಲೀಸ್ ಸಿಬ್ಬಂದಿಗಳು ಹೆಚ್ಚಾಗಿದ್ದಾರೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬಲದಲ್ಲಿ 16,051ರಷ್ಟು ಸಿಬ್ಬಂದಿ ಹೆಚ್ಚಳವಾಗಿದ್ದಾರೆ..
ಪೊಲೀಸ್ ಜನಸಂಖ್ಯಾ ಅನುಪಾತದ ಒಟ್ಟು ವರದಿಯ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಈಗ 192.95 ಪೊಲೀಸರು ಇದ್ದಾರೆ. ಇದರಿಂದಾಗಿ ಅನುಪಾತ ಸ್ವಲ್ಪ ಹೆಚ್ಚಳವನ್ನು ತೋರಿಸಿದೆ. ವರದಿಯಲ್ಲಿರುವ ಇತರ ದತ್ತಾಂಶಗಳ ಪ್ರಕಾರ, ದೇಶದ ಪೊಲೀಸ್ ಠಾಣೆಗಳ ಸಂಖ್ಯೆಯು 15,579 ರಿಂದ 16,422 ಕ್ಕೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.