ಸಿಕ್ಕಿಂ: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅಲಿಯಾಸ್ ಪಿಎಸ್ ಗೋಲೆ ಅವರು ವಿಧಾನಸಭೆ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಗುರುವಾರ ನಡೆದ ಮತ ಎಣಿಕೆಯಲ್ಲಿ ಪೊಕ್ಲೋಕ್-ಕಾಮ್ರಾಂಗ್ ಕ್ಷೇತ್ರದಲ್ಲಿ ಅವರು ಭರ್ಜರಿ ಜಯವನ್ನು ಗಳಿಸಿದ್ದಾರೆ.
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಭ್ಯರ್ಥಿಯೂ ಆಗಿರುವ ಗೋಲೆ ಭಾರಿ ಅಂತರದಿಂದ ಜಯ ಸಾಧಿಸಿದರೆ, ಭಾರತೀಯ ಜನತಾ ಪಕ್ಷದ ಸೋನಮ್ ತ್ಸೆರಿಂಗ್ ವೆಂಚುಂಗ್ಪಾ ಅವರು ಮಾರ್ಟಮ್-ರುಮ್ಟೆಕ್ ಸ್ಥಾನದಿಂದ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ.
ಗಂಗ್ಟೋಕ್ ಕ್ಷೇತ್ರದ ಫಲಿತಾಂಶವನ್ನು ಇನ್ನೂ ಘೋಷಿಸಲಾಗಿಲ್ಲ. ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಲ್ಲಿ ಉಪ ಚುನಾವಣೆ ಜರುಗಿತ್ತು.
32 ಸದಸ್ಯರ ಸಿಕ್ಕಿಂ ಅಸೆಂಬ್ಲಿಯಲ್ಲಿ, ಆಡಳಿತಾರೂಢ ಎಸ್ಕೆಎಂ ಈಗ 18 ಶಾಸಕರನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಬಿಜೆಪಿ (10) ಮತ್ತು ಎಸ್ಡಿಎಫ್ (1) ಇವೆ. ಮೂರು ಸ್ಥಾನಗಳು ಖಾಲಿ ಇದ್ದವು, ಅವುಗಳಿಗೆ ಇಂದು ಶಾಸಕರ ಆಯ್ಕೆಯಾಗಿದೆ.
It’s official now. BJP’s maiden victory in Sikkim. BJP candidate Sonam Venchungpa won from Rumtek assembly segment by a margin of 1800 votes. Congrats to Sikkim BJP
— Ram Madhav (@rammadhavbjp) October 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.