ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾವೀನ್ಯ ಕಲಿಕಾ ಕಾರ್ಯಕ್ರಮ ‘DHRUV’ ಅಡಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ಈ ವೇಳೆ ಮಾತನಾಡಿದ ಪೋಖ್ರಿಯಾಲ್, “ದೇಶದಾದ್ಯಂತದ ವಿಜ್ಞಾನ ಮತ್ತು ಕಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಲ್ಲಿನ ಗುಪ್ತ ಪ್ರತಿಭೆಯನ್ನು ಹೊರ ತರಬೇಕು. ಇದೇ ಕಾರಣಕ್ಕೆ ಅಕ್ಟೋಬರ್ 10ರಂದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ‘DHRUV’ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು, ಇದರಡಿಯಲ್ಲಿನ ಮಕ್ಕಳನ್ನು ಧ್ರುವ್ ಎಂದು ಕರೆಯಲಾಯಿತು” ಎಂದಿದ್ದಾರೆ.
ಕಳೆದ 14 ದಿವಸಗಳಿಂದ ಮೊದಲ ಬ್ಯಾಚಿನ 30 ವಿಜ್ಞಾನದ ಮತ್ತು 30 ಕಲೆಯ ವಿದ್ಯಾರ್ಥಿಗಳಿಗೆ ನಾವೀನ್ಯ ಕಲಿಕಾ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ. 14 ದಿನಗಳ ತಮ್ಮ ಅನುಭವವನ್ನು ಮಕ್ಕಳು ಇಂದು ಪೋಖ್ರಿಯಾಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮವನ್ನು ನಾಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಮಾಪಣಗೊಳಿಸಲಿದ್ದಾರೆ.
ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಲು ಮತ್ತು ಅವರ ಪ್ರತಿಭೆಯನ್ನು, ಜ್ಞಾನವನ್ನು, ಕೌಶಲ್ಯವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.