ನವದೆಹಲಿ: ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಪ್ಲಾಸ್ಟಿಕ್ಗೆ ಪರ್ಯಾಯವನ್ನು ಕಂಡುಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಕೇಂದ್ರ ಸರಕಾರವು ಪರಿಸರಕ್ಕೆ ಮಾರಕವಾದ ಏಕ-ಬಳಕೆಯ ಪ್ಲಾಸ್ಟಿಕ್ಗೆ ಉತ್ತಮ ಪರ್ಯಾಯವನ್ನು ಸೂಚಿಸುವಂತೆ ಸ್ಟಾರ್ಟ್ಅಪ್ ಕಂಪನಿಗಳಿಗೆ ಸ್ಪರ್ಧೆಯನ್ನು ಆಯೋಜನೆಗೊಳಿಸಿದೆ. ಅತ್ಯುತ್ತಮ ಪರ್ಯಾಯವನ್ನು ಸೂಚಿಸುವ ಸ್ಟಾರ್ಟ್ಅಪ್ಗಳಿಗೆ ಪ್ರಥಮ ಬಹುಮಾನ ರೂ. 3 ಲಕ್ಷ ಮತ್ತು ದ್ವಿತೀಯ ಬಹುಮಾನ ರೂ. 2 ಲಕ್ಷ ಘೋಷಿಸಲಾಗಿದೆ.
“ವಿನ್ಯಾಸ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವೀನ್ಯಕಾರರು ಮತ್ತು ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವುದು ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧದ ಸವಾಲಿನ ಗುರಿಯಾಗಿದೆ” ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ (ಡಿಪಿಐಐಟಿ) ಹೇಳಿದೆ.
ಎಲ್ಲಾ ಸ್ಟಾರ್ಟ್ಅಪ್ಗಳಿಗೂ ಸವಾಲು ಮುಕ್ತವಾಗಿದೆ. ಒದಗಿಸಲಾಗುವ ಪರಿಹಾರವು, ಕನಿಷ್ಠ ಕಾರ್ಯಸಾಧ್ಯವಾಗುವ ಉತ್ಪನ್ನ, ಪರಿಕಲ್ಪನೆಯ ಪುರಾವೆ ಅಥವಾ ಇನ್ನಷ್ಟು ಅಭಿವೃದ್ಧಿಯ ಅಗ್ಯವಿರುವ ಪರಿಹಾರ ಈ ಮೂರರ ಹಂತದಲ್ಲಿರಬೇಕು ಎಂದು ಹೇಳಿದೆ.
ಡಿಪಿಐಐಟಿ ನಿಗದಿಪಡಿಸಿದ ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಉತ್ತಮ ನಮೂದುಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಅಕ್ಟೋಬರ್ 31 ರಂದು ಫಲಿತಾಂಶ ಪ್ರಕಟಿಸಲಾಗುವುದು.
ಪ್ಲಾಸ್ಟಿಕ್ ಚೀಲಗಳು, ಸ್ಟ್ರಾಗಳು, ಕಾಫಿ ಸ್ಟಿರರ್ಗಳು, ಸೋಡಾ ಮತ್ತು ನೀರಿನ ಬಾಟಲಿಗಳು ಮತ್ತು ಹೆಚ್ಚಿನ ಆಹಾರ ಪ್ಯಾಕೇಜಿಂಗ್ ಮುಂತಾದ ಏಕ-ಬಳಕೆಯ ಪ್ಲಾಸ್ಟಿಕ್ ಗಳಿಗೆ ಪರ್ಯಾಯವನ್ನು ಹುಡುಕಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.