ನವದೆಹಲಿ: Ritam ತನ್ನ ಸಾಮಾಜಿಕ ಮಾಧ್ಯಮ ಪ್ರಸ್ತುತತೆಯೊಂದಿಗೆ 2019ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಕ್ರಿಯೆ ಮತ್ತು ಪ್ರತಿಬಿಂಬದ ದೊಡ್ಡ ಮಟ್ಟದ ಪರಿಣಾಮವನ್ನು ಸೃಷ್ಟಿಸಿದೆ. ಅದರ SVG ಮ್ಯಾಪ್ಗಳು ಮತ್ತು ಮುನ್ಸೂಚನಾ ವಿಶ್ಲೇಷಣೆಗಳು ಪಾಲುದಾರ ಪೋರ್ಟಲ್ ಗಳಿಂದ ಮತ್ತು ಸಾಮಾನ್ಯ ಜನರಿಂದ ಭಾರೀ ಶ್ಲಾಘನೆಯನ್ನು ಗಳಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿಯ ಕಾರ್ಯವನ್ನು ಮಾಡುವತ್ತ ಅದರ ಪ್ರಯತ್ನ ಮುಂದುವರೆದಿದೆ.
ಇಂದು Ritam ಆ್ಯಪ್ ಮತ್ತು ಫೇಸ್ಬುಕ್ ಪೇಜ್ನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಅವರೊಂದಿಗಿನ ಮಾತುಕತೆ ನೇರ ಪ್ರಸಾರಗೊಳ್ಳಲಿದೆ. ಈ ಮಾತಕತೆಯಲ್ಲಿ ಭಾಗವಹಿಸಿ, ಸಹಸ್ರಬುದ್ಧೆ ಅವರಿಗೆ ಪ್ರಶ್ನೆಗಳನ್ನು ಕೇಳಲಿಚ್ಛಿಸುವರು ಲೈವ್ ಸೆಷನ್ ನಲ್ಲಿ ಭಾಗಿಯಾಗಬಹುದಾಗಿದೆ.
ಇಂದು ಬೆಳಿಗ್ಗೆ 11.45ಕ್ಕೆ ಲೈವ್ ಕಾರ್ಯಕ್ರಮ ಆರಂಭವಾಗಲಿದೆ.
Ritam FB link: http://facebook.com/TheRitamApp ನಲ್ಲಿ ಲೈವ್ ಸೆಷನ್ನಿನಲ್ಲಿ ಭಾಗಿಯಾಗಬಹುದು.
ಅಥವಾ
ಪ್ರಶ್ನೆಗಳನ್ನು ಟೈಪಿಸಿ, ಅದನ್ನು https://forms.gle/eYohSuSHvpYRnj8x5 ಈ ಮೂಲಕ ಕಳುಹಿಸಿಕೊಡಬಹುದಾಗಿದೆ.
ಸಹಸ್ರಬುದ್ಧೆ ಅವರೊಂದಿಗೆ ಕೆಲವು ಪ್ರಮುಖ ಪ್ರಭಾವಶಾಲಿಗಳು ವೇದಿಕೆ ಹಂಚಿಕೊಳ್ಳಲಿದ್ದಾರೆ ಮತ್ತು ಇನ್ನೂ ಅನೇಕರು ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಅವರು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಮತ್ತು ಚುನಾವಣೆಗಳನ್ನೂ ಮೀರಿ, ಮುಂಬರುವ ಸಮಯಗಳಲ್ಲಿ ಬಿಜೆಪಿಯ ಹಾದಿಯ ಬಗೆಗಿನ ತಮ್ಮ ದೃಷ್ಟಿ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ನಿಜಕ್ಕೂ ಒಳನೋಟವುಳ್ಳ ಮತ್ತು ಆಸಕ್ತಿದಾಯಕ ಮಾತಕತೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.