ಲಕ್ನೋ: ಅಯೋಧ್ಯಾ ವಿವಾದ ಬಗೆಹರಿದ ಬಳಿಕ, ಕಾಶಿ ಮತ್ತು ಮಥುರಾದಲ್ಲೂ ಬೃಹತ್ ದೇಗುಲವು ನಿರ್ಮಾಣವಾಗಲಿದೆ ಎಂದು ಸಂತರ ಉನ್ನತ ಮಂಡಳಿ ‘ಅಖಿಲ ಭಾರತೀಯ ಅಖಾರ ಪರಿಷದ್(ಎಬಿಎಪಿ)’ ಘೋಷಣೆ ಮಾಡಿದೆ.
“ಮಸೀದಿಗಳನ್ನು ನಿರ್ಮಿಸಲು ಕಾಶಿ ಮತ್ತು ಮಥುರಾದಲ್ಲೂ ದೇವಾಲಯಗಳನ್ನು ನೆಲಸಮ ಮಾಡಲಾಯಿತು. ನಾವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಮತ್ತು ಈ ಸ್ಥಳಗಳಲ್ಲಿ ಭವ್ಯವಾದ ದೇವಾಲಯ ನಿರ್ಮಿಸುವುದಾಗಿ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದೂ ಸರ್ಕಾರಗಳು ಆಡಳಿತದಲ್ಲಿವೆ ಮತ್ತು ದೇಗುಲ ನಿರ್ಮಾಣಕ್ಕೆ ಇದಕ್ಕಿಂತಲೂ ಉತ್ತಮವಾದ ಸಮಯ ಇನ್ನೊಂದು ಇರಲು ಸಾಧ್ಯವಿಲ್ಲ” ಎಬಿಎಪಿ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಗುರುವಾರ ಹೇಳಿದ್ದಾರೆ.
ಕಾಶಿ ಮತ್ತು ಮಥುರಾವನ್ನು ಮುಕ್ತಗೊಳಿಸುವ ಬೇಡಿಕೆಯನ್ನು ಹಲವು ಸಮಯದಿಂದ ಮುಂದಿಡುತ್ತಾ ಬಂದಿದ್ದೇವೆ ಎಂದು ಮಹಂತ್ ಹೇಳಿದ್ದಾರೆ.
“ಅಯೋಧ್ಯೆಯಲ್ಲಿ ನ್ಯಾಯಾಲಯ ನೀಡುವ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲಕರವಾಗಲಿದೆ ಎಂಬ ವಿಶ್ವಾಸ ನಮಗಿದೆ ಮತ್ತು ಮುಸ್ಲಿಂ ಕಡೆಯವರನ್ನು ಪ್ರತಿನಿಧಿಸುವ ವಕೀಲರ ವರ್ತನೆಯಲ್ಲಿ ಹತಾಶೆ ಸ್ಪಷ್ಟವಾಗಿ ಕಂಡುಬಂದಿದೆ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರದ ಹಿತದೃಷ್ಟಿಯಿಂದ ಕಾಶಿ ಮತ್ತು ಮಥುರಾ ಮೇಲಿನ ಹಕ್ಕುಗಳನ್ನು ತ್ಯಜಿಸುವಂತೆ ಮುಸ್ಲಿಮರಿಗೆ ಮಹಂತ ಕರೆ ನೀಡಿದ್ದಾರೆ.
ಈ ಎರಡು ಸ್ಥಳಗಳಲ್ಲಿ ಭವ್ಯ ದೇವಾಲಯಗಳ ನಿರ್ಮಾಣಕ್ಕೆ ಮುಸ್ಲಿಮರು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಾರಣಾಸಿಯಲ್ಲಿ, ಕಾಶಿ ವಿಶ್ವನಾಥ ದೇವಾಲಯವನ್ನು ಗ್ಯಾನವಪಿ ಮಸೀದಿ ಭಾಗಶಃ ಅತಿಕ್ರಮಿಸಿದೆ. ಈ ಸ್ಥಳದಲ್ಲಿರುವ ಮೂಲ ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂಸ ಮಾಡಿದ ನಂತರ 1669 ರಲ್ಲಿ ಔರಂಗಜೇಬ ಈ ಮಸೀದಿಯನ್ನು ನಿರ್ಮಿಸಿದ.
ಹಿಂದೂ ಸಂಘಟನೆಗಳು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದ ಭವ್ಯ ನವೀಕರಣ ಮಾಡುವಂತೆ ಮತ್ತು ಮಸೀದಿಯನ್ನು ಸ್ಥಳಾಂತರಿಸುವಂತೆ ಮನವಿ ಮಾಡುತ್ತಲೇ ಇವೆ.
ಮಥುರಾದಲ್ಲೂ, ಕೃಷ್ಣ ಜನಭೂಮಿಯನ್ನು ಆಕ್ರಮಿಸಿಕೊಂಡು ಮುಸ್ಲಿಂ ದೊರೆಗಳು ಮಸೀದಿ ಮದರಸಗಳನ್ನು ಸ್ಥಾಪನೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.