ನವದೆಹಲಿ: ಭಾರತವು ಮುಂದಿನ ಯುದ್ಧಗಳನ್ನು ಸಂಪೂರ್ಣ ಸ್ವದೇಶಿ ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಿ ಗೆಲ್ಲಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ನಡೆದ ರಕ್ಷಣಾ ಮತ್ತು ಸಂಶೋಧನಾ ಕೇಂದ್ರ (ಡಿಆರ್ಡಿಓ) ನಿರ್ದೇಶಕರ 41ನೇ ಸಮಾವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಡಿಆರ್ಡಿಓ ಭಾರತೀಯ ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದೆ. ಸ್ವದೇಶಿ ತಂತ್ರಜ್ಞಾನಗಳನ್ನು ಅದು ಅಳವಡಿಸಿಕೊಂಡಿರುವುದು ಶ್ಲಾಘನೀಯ ಕಾರ್ಯ. ಮುಂದೆ ಎದುರಾಗುವ ಯುದ್ಧಗಳನ್ನು ಭಾರತ ಸಂಪೂರ್ಣ ಸ್ವದೇಶಿ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನಗಳ ಮೂಲಕವೇ ಎದುರಿಸಿ ಜಯಿಸಲಿದೆ” ಎಂದಿದ್ದಾರೆ.
ಭಾರತದಲ್ಲಿ ರಕ್ಷಣಾ ಮತ್ತು ಸಂಶೋಧನಾ ಕ್ಷೇತ್ರ ಹೊಸದು. ಆದರೆ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ರಕ್ಷಣಾ ಸಂಶೋಧನಾ ಕ್ಷೇತ್ರ ಅಭಿವೃದ್ಧಿ ಸಾಧಿಸಬೇಕಾದ ಕಾಲ ಈಗ ಬಂದಿದೆ. ತಂತ್ರಜ್ಞಾನದ ನೆರವು, ಪರಿಣಾಮಕಾರಿಯಾದ ಮತ್ತು ಕಡಿಮೆ ಹಾನಿಯ ತಂತ್ರಗಳನ್ನು ಹೊಂದುವ ಮೂಲಕ ನಾವು ಭವಿಷ್ಯದ ಯುದ್ಧಗಳನ್ನು ಹೋರಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದ ಯುದ್ಧಗಳಿಗೆ ನಾವು ಈಗಿನಿಂದಲೇ ಸಜ್ಜಾಗಬೇಕು. ಸೈಬರ್, ಬಾಹ್ಯಾಕಾಶ, ಲೇಸರ್, ಎಲೆಕ್ಟ್ರಾನಿಕ್ಸ್, ರೊಬೋಟಿಕ್ ಹೀಗೆ ಎಲ್ಲಾ ವಿಧಾನದ ಯುದ್ಧಗಳಿಗಾಗಿಯೂ ನಾವು ತಂತ್ರಜ್ಞಾನಗಳನ್ನು, ಕೃತಕ ಬುದ್ಧಿಮತ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
RM Shri @rajnathsingh along with Chairman & Secy @DRDO_India Dr. G Satheesh Reddy, COAS Gen Bipin Rawat, CNS Adm Karambir Singh, CAS ACM RKS Bhadauria and senior officers of the organisation & MoD at the inauguration of 41st Directors Conference at @DRDO_India in New Delhi, today pic.twitter.com/zJWhMNeSLE
— ADG (M&C) DPR (@SpokespersonMoD) October 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.