ಕಳೆದ ಐದು ವರ್ಷಗಳಲ್ಲಿ ರಾಷ್ಟ್ರವು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಆಡಳಿತದ ಆದರ್ಶಗಳಲ್ಲಿ ಅಭೂತಪೂರ್ವ ವೃದ್ಧಿಯನ್ನು ಕಂಡಿದೆ. ಹೊಸ ಭಾರತದ ಸಾಮೂಹಿಕ ದೃಷ್ಟಿಕೋನವು ಪ್ರತಿಯೊಬ್ಬ ಭಾರತೀಯನನ್ನೂ ಒಂದು ಸಾಮಾನ್ಯ ಗುರಿಯೊಂದಿಗೆ ಒಂದುಗೂಡಿಸಿದೆ. ಅದುವೇ ಈ ಮಹತ್ವದ ಪ್ರಯಾಣದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಪ್ರೇರಣೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ತಳಮಟ್ಟದಲ್ಲಿ ವಾಸ್ತವವಾಗುವುದನ್ನು ಖಾತ್ರಿಪಡಿಸುವಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಗಮನಾರ್ಹ ಪಾತ್ರ ವಹಿಸಿವೆ ಎಂಬುದು ಉಲ್ಲೇಖಾರ್ಹ. ಹರಿಯಾಣ ಸರ್ಕಾರವು ತನ್ನ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳಲ್ಲಿ ಪರಿವರ್ತನೆಗಳನ್ನು ಉಂಟುಮಾಡುವಲ್ಲಿ ಮಹತ್ವದ ಕಾರ್ಯವನ್ನು ನಿಭಾಯಿಸಿದೆ. ಮನೋಹರ್ ಲಾಲ್ ಖಟ್ಟರ್ ಸರ್ಕಾರದ ಕಾರ್ಯಕ್ಷಮತೆಯ ಒಳನೋಟಗಳ ವಿಶ್ಲೇಷಣೆ ಇಲ್ಲಿದೆ.
ತನ್ನ ಹೆಣ್ಣುಮಕ್ಕಳಿಗಾಗಿ ದೃಢವಾಗಿ ನಿಂತ ಹರಿಯಾಣ
ಮನೋಹರ್ ಲಾಲ್ ಸರ್ಕಾರವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ. ಆದರೆ ಅವುಗಳ ಪೈಕಿ ವಿಶೇಷ ಉಲ್ಲೇಖಕ್ಕೆ ಅರ್ಹವಾದುದು ಹೆಣ್ಣುಮಕ್ಕಳಿಗಾಗಿ ಅದು ತೆಗೆದುಕೊಂಡ ಕ್ರಮಗಳು. ಹರಿಯಾಣದಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂಬ ಅಪಖ್ಯಾತಿ ಹಲವು ವರ್ಷಗಳಿಂದ ಇದೆ. ಹೆಣ್ಣು ಮಕ್ಕಳ ಕಡಿಮೆ ಜನನ ಪ್ರಮಾಣ ಮತ್ತು ಹೆಣ್ಣು ಮಕ್ಕಳ ಸಂಖ್ಯೆ ಅಪಾಯಕಾರಿ ರೀತಿಯಲ್ಲಿ ಕ್ಷೀಣಿಸುತ್ತಿರುವುದರ ವಿರುದ್ಧ ಹೋರಾಡುವುದು ಹರಿಯಾಣಕ್ಕೆ ಅನಿವಾರ್ಯವಾಗಿದೆ. ಇದನ್ನು ಬಿಜೆಪಿ ಸರ್ಕಾರವು ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಪರಿಸ್ಥಿತಿ ಬದಲಾವಣೆಗೆ ಬೇಕಾಗಿರುವ ಮನಸ್ಥಿತಿ ಬದಲಾವಣೆ ಮತ್ತು ನಡವಳಿಕೆಯ ಬದಲಾವಣೆ ತರುವಲ್ಲಿ ಸಾಕಷ್ಟು ಶ್ರಮಿಸಿದೆ. ಬಿಜೆಪಿ ಆಡಳಿತ ಬಂದ ಬಳಿಕ ಅಲ್ಲಿ ಮೊದಲ ಬಾರಿಗೆ ಲಿಂಗ ಅನುಪಾತವು 900 ರ ಗಡಿ ದಾಟಿ 914 ಕ್ಕೆ ತಲುಪಿದೆ ಎಂಬ ಅಂಶವು ರಾಜ್ಯ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಸಿಎಂ ಕಚೇರಿಯಿಂದಲೇ ಎಸ್ಆರ್ಬಿಗಳ (ಲಿಂಗ-ಅನುಪಾತ-ಜನನದ ಸಮಯದಲ್ಲಿ) ನಿಕಟ ಪರಿಶೀಲನೆ, ಗ್ರಾಮಗಳ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಸರಿಪಡಿಸುವುದು, ಸಾಂಸ್ಥಿಕ ವಿತರಣೆಯನ್ನು ಉತ್ತೇಜಿಸುವುದು (ಇದು ಪ್ರಸ್ತುತ 91% ರಷ್ಟಿದೆ) ಕಟ್ಟುನಿಟ್ಟಾದ ಕಣ್ಗಾವಲು ಮತ್ತು ತಡೆಗಟ್ಟುವ ಕಾರ್ಯವಿಧಾನದ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ನಿಗ್ರಹಿಸುವುದು, ಮತ್ತು ಪಿಸಿಪಿಎನ್ಡಿಟಿ ಕಾಯ್ದೆಯಡಿ ಹಲವು ಕ್ರಮಗಳನ್ನು ಕೈಗೊಂಡಿದ್ದು ಸರ್ಕಾರದ ಹೆಗ್ಗಳಿಕೆ. ಹೆಣ್ಣು ಮಗುವಿನ ಜನನದ ವೇಳೆ ಕುವಾನ್ ಪೂಜನ್, ಬೇಟಿ ಜನ್ಮ ಮಹೋತ್ಸವ್, ಹರಿಯಾಣದ ಧೀಮಂತ ನಾಯಕಿಯರನ್ನು ಗೌರವಿಸುವುದು, ಆರ್ಥಿಕ ಪ್ರೋತ್ಸಾಹಕ ಯೋಜನೆ ಮುಂತಾದ ಸಾಮಾಜಿಕ ಕ್ರಮಗಳನ್ನು ಹೆಣ್ಣು ಮಕ್ಕಳ ಉತ್ತೇಜನಕ್ಕಾಗಿ ಅಲ್ಲಿ ತರಲಾಗಿದೆ.
ಮತ್ತೊಂದೆಡೆ, ಮಹಿಳಾ ಸಬಲೀಕರಣದ ಸವಾಲುಗಳನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಉದಾಹರಣೆಗೆ, ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸಲು, ಶಾಲೆಗಳಿಗೆ ಅವರ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರವು ಚತ್ರ ಪರಿವಾಹನ್ ಸುರಕ್ಷ ಯೋಜನೆಯನ್ನು ತಂದಿದೆ. ಇದರಡಿ ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಮತ್ತು ಸುರಕ್ಷಿತ ಪ್ರಯಾಣವನ್ನು ಕಲ್ಪಿಸಲಾಗಿದೆ. ಇದಲ್ಲದೆ, ರಾಜ್ಯವು 181 ಬಸ್ಸುಗಳನ್ನು ವಿಶೇಷವಾಗಿ ಮಹಿಳೆಯರಿಗಾಗಿ ಪ್ರಾರಂಭಿಸಿದೆ, ಭದ್ರತಾ ಸಿಬ್ಬಂದಿಯನ್ನು ಇದಕ್ಕೆ ಒದಗಿಸಿದೆ. ಇದೇ ವೇಳೆ ಮಹಿಳಾ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಂಡಿದೆ. ಶಾಲೆ ಮತ್ತು ಕಾಲೇಜು ಹೋಗುವ ಬಾಲಕಿಯರಿಗಾಗಿ ಸರ್ಕಾರವು ದುರ್ಗಾ ಶಕ್ತಿ ಆ್ಯಪ್ ಮತ್ತು ದುರ್ಗಾ ಶಕ್ತಿ ಕ್ಷಿಪ್ರ ಕ್ರಿಯಾ ಪಡೆಗಳನ್ನು ಪ್ರಾರಂಭಿಸಿದೆ. ಕಳೆದ ಐದು ವರ್ಷಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳ ಸಂಖ್ಯೆ 2 ರಿಂದ 31 ಕ್ಕೆ ಏರಿದೆ. ರಾಜ್ಯದಲ್ಲಿ ಮಹಿಳೆಯರ ಸಬಲೀಕರಣದ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ರಾಜಕೀಯ ಇಚ್ಛಾಶಕ್ತಿ ಮತ್ತು ದೃಢವಾದ ನೀತಿ ನಿರೂಪಣೆಯನ್ನು ಇದು ಪ್ರದರ್ಶಿಸುತ್ತದೆ.
ಉತ್ತಮ ಆಡಳಿತ
ಉತ್ತಮ ಆಡಳಿತದ ಐದು ವರ್ಷಗಳ ಬಿಜೆಪಿ ಸರ್ಕಾರದ ಒಟ್ಟು ಕಾರ್ಯಾಚರಣೆಗಳಲ್ಲಿ ಉತ್ತಮವಾಗಿ ಪ್ರತಿಫಲಿಸಿದೆ. ರಾಜ್ಯ ಸರ್ಕಾರವು ಸಹಭಾಗಿತ್ವದ ಆಡಳಿತದಲ್ಲಿ ಒಂದು ಮಾನದಂಡವನ್ನು ನಿಗದಿಪಡಿಸಿದೆ ಮತ್ತು ಇ-ಸೇವೆಗಳು ಮತ್ತು ‘ಸಿಎಮ್ ವಿಂಡೋ’ ನಂತಹ ಕ್ರಮಗಳ ಮೂಲಕ, ಸಾಮಾನ್ಯ ಜನರನ್ನು ಸಬಲೀಕರಣಗೊಳಿಸುತ್ತಿದೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತಿದೆ. ಫೇಸ್ ಲೆಸ್, ಕಾಗದರಹಿತ ಮತ್ತು ನಗದುರಹಿತ ಸೇವೆ / ಸ್ಕೀಮ್ ವಿತರಣಾ ಮಾದರಿ, ಅಂತ್ಯೋದಯ-ಸರಳ್ ಯೋಜನೆಗಳು ಡಿಜಿಟಲ್ ಇಂಡಿಯಾದ ದೃಷ್ಟಿಕೋನಕ್ಕೆ ಪೂರಕವಾಗಿದೆ. 500 ಕ್ಕೂ ಹೆಚ್ಚು ಸೇವೆಗಳ ಸಂಪೂರ್ಣ ಡಿಜಿಟಲೀಕರಣದ ಮೂಲಕ ಹರಿಯಾಣದಲ್ಲಿ ನಾಗರಿಕ ಸೇವಾ ವಿತರಣೆಯನ್ನು ಪರಿವರ್ತಿಸಲು ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ, ಹರಿಯಾಣವು ಸಾಮಾಜಿಕ-ಆರ್ಥಿಕ ಪರಿವರ್ತನೆಗಳಿಗಾಗಿ ಸುದ್ದಿಯಲ್ಲಿರುವುದು ನಿಜಕ್ಕೂ ಶ್ಲಾಘನೀಯ. ದೃಢವಾದ ಕಾರ್ಯ ವಿಧಾನಗಳು ಹಗರಣಗಳು ನಡೆಯದಂತೆ ನೋಡಿಕೊಂಡಿದೆ. ಭ್ರಷ್ಟಾಚಾರ ಅಥವಾ ಕಟ್ಟ ಆಡಳಿತದ ಆರೋಪವನ್ನು ಮಾಡಲು ಅಲ್ಲಿನ ಪ್ರತಿಪಕ್ಷಗಳಿಗೆ ಸದ್ಯದ ಸ್ಥಿತಿಯಲ್ಲಿ ಆಗುತ್ತಿಲ್ಲ.
ಹೂಡಿಕೆದಾರ ಸ್ನೇಹಿ ಹರಿಯಾಣ
ಅನೇಕ ಉದ್ದೇಶಿತ ಸುಧಾರಣೆಗಳು ಮತ್ತು ಪ್ರಮುಖ ಪ್ರಕ್ರಿಯೆಗಳ ಡಿಜಿಟಲೀಕರಣದ ಪರಿಣಾಮವಾಗಿ, ರಾಜ್ಯದಲ್ಲಿ ಸಕಾರಾತ್ಮಕ ಹೂಡಿಕೆ ವಾತಾವರಣವನ್ನು ಬೆಳೆಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈಝಿ ಆಫ್ ಬ್ಯುಸಿನೆಸ್ ಇಂಡೆಕ್ಸ್ 2018 ರ ಅಡಿಯಲ್ಲಿ ಹರಿಯಾಣವು 2014 ರಲ್ಲಿ 14 ನೇ ಸ್ಥಾನದಿಂದ 2019 ರಲ್ಲಿ 3 ನೇ ಸ್ಥಾನಕ್ಕೆ ಏರಿತು ಮತ್ತು ಉತ್ತರದ ರಾಜ್ಯಗಳ ಪೈಕಿ ಇದು 1ನೇ ಸ್ಥಾನದಲ್ಲಿದೆ ಎಂಬುದು ಗಮನಾರ್ಹ.
ಹೂಡಿಕೆಯನ್ನು ಆಕರ್ಷಿಸುವಲ್ಲಿ ಪ್ರಮುಖ ಅಡಚಣೆಯಾಗಿದ್ದ ಇನ್ಸ್ಪೆಕ್ಟರ್ ರಾಜ್ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಖಟ್ಟರ್ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಥರ್ಡ್ ಪಾರ್ಟಿ ಪರಿಶೀಲನೆ, ಸ್ವಯಂ ಪ್ರಮಾಣೀಕರಣ ವ್ಯವಸ್ಥೆ, ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಿಸ್ಟಮ್, ವ್ಯಾಪಾರ ಪರವಾನಗಿ ಮತ್ತು ಪರವಾನಗಿಗಳನ್ನು ನೀಡುವ ಆನ್ಲೈನ್ ವ್ಯವಸ್ಥೆಗಳು ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿವೆ. ಇಂದು ಹರಿಯಾಣದಲ್ಲಿ, ಇ-ಬಿಜ್ ಪೋರ್ಟಲ್ Investharyana.nic.in. ಮೂಲಕ ಪ್ರಮುಖ ಪ್ರಕ್ರಿಯೆಗಳ ಅಪ್ಲಿಕೇಶನ್ ಫೈಲಿಂಗ್ ಮತ್ತು ಅನುಮೋದನೆ ಪ್ರಕ್ರಿಯೆಯನ್ನು ಡಿಜಿಟಲ್ ಆಗಿ ಖಾತ್ರಿಪಡಿಸಲಾಗುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರ, ಈ ಪೋರ್ಟಲ್ ಮೂಲಕ, 5,819 ಅರ್ಜಿದಾರರಿಗೆ 1,30,533 ಕೋಟಿ ರೂ.ಗಳ ಹೂಡಿಕೆ ಮತ್ತು 7,36,647 ಜನರಿಗೆ ಉದ್ಯೋಗ ಸಂಭಾವ್ಯತೆಯನ್ನು ಒಳಗೊಂಡ ಯೋಜನೆಗಳಿಗೆ ಶೇ.100ರಷ್ಟು ಸೇವೆಗಳನ್ನು ಒದಗಿಸಲಾಗಿದೆ.
2011 ರ ಕೈಗಾರಿಕಾ ನೀತಿಯನ್ನು ಸಹ ಪರಿಷ್ಕರಿಸಲಾಗಿದೆ ಮತ್ತು ಹರಿಯಾಣ ಹೂಡಿಕೆ ಮತ್ತು ವ್ಯವಹಾರ ಪ್ರಚಾರ ನೀತಿ, 2015 ಹೂಡಿಕೆದಾರರ ಆಸಕ್ತಿಯನ್ನು ರಕ್ಷಿಸಲು ಮತ್ತು ಸುಗಮಗೊಳಿಸುವ ಕ್ರಮಗಳನ್ನು ಹೊಂದಿದೆ. ನೀತಿಯಡಿಯಲ್ಲಿ, ಒಂದೇ ಸೂರಿನಡಿ ವಿವರಗಳು ಸಿಗುತ್ತಿವೆ ಮತ್ತು ಅನುಮೋದನೆಗಳಿಗಾಗಿ ಹರಿಯಾಣ ಉದ್ಯಮಶೀಲ ಪ್ರಚಾರ ಮಂಡಳಿಯನ್ನು ರಚಿಸಲಾಗಿದೆ. ಹರಿಯಾಣ ಉದ್ಯಮಶೀಲ ಪ್ರಚಾರ ಕೇಂದ್ರದ ಮೂಲಕ 45 ದಿನಗಳಲ್ಲಿ ಎಲ್ಲಾ ರೀತಿಯ ಅನುಮತಿಗಳನ್ನು ನೀಡಲಾಗಿದೆ.
ಉದ್ಯಮಶೀಲತೆಗೆ ಒತ್ತು
ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಸ್ಟಾರ್ಟ್ ಅಪ್ಗಳನ್ನು ನೋಂದಾಯಿಸಲಾಗಿದೆ ಎಂಬ ಹೆಗ್ಗಳಿಕೆ ಹರಿಯಾಣ ರಾಜ್ಯಕ್ಕೆ ಇದೆ. ಇದಲ್ಲದೆ, ರಾಜ್ಯದಲ್ಲಿ 3.8 ಮಿಲಿಯನ್ ಮುದ್ರಾ ಸಾಲಗಳನ್ನು ವಿತರಿಸಲಾಗಿದೆ, ಅಂದರೆ ಪ್ರತಿ ನಾಲ್ಕನೇ ಮತದಾರರು ಮುದ್ರಾ ಫಲಾನುಭವಿ ಮತ್ತು ಉದ್ಯೋಗ ಸೃಷ್ಟಿಕರ್ತರು, ಇದರಿಂದಾಗಿ ಉದ್ಯೋಗ ಮತ್ತು ಉದ್ಯಮಶೀಲತೆಯ ಸ್ವಾವಲಂಬಿ ಪರಿಸರ ವ್ಯವಸ್ಥೆಯು ಅಲ್ಲಿ ಸೃಷ್ಟಿಯಾಗುತ್ತಿದೆ.
ಮೀಸಲಾದ ಕ್ಲಸ್ಟರ್ಗಳ ಅಭಿವೃದ್ಧಿಯ ಮೂಲಕ ಎಂಎಸ್ಎಂಇ ವಲಯವನ್ನು ಅಭಿವೃದ್ಧಿಪಡಿಸುವಲ್ಲಿ ಅಲ್ಲಿ ಹೆಚ್ಚಿನ ಗಮನವನ್ನು ಹರಿಸಲಾಗುತ್ತಿದೆ ಮತ್ತು ಇದಕ್ಕೆ ಸಂಬಂಧಿಸಿದ ಉಪಕ್ರಮಗಳು ರಾಷ್ಟ್ರೀಯ ಮನ್ನಣೆಯನ್ನು ಗಳಿಸುತ್ತಿವೆ. ಈ ಒಂದು ವಲಯದಿಂದಲೇ 3.5 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡಲಾಗಿದೆ.
ಪ್ರಜಾಪ್ರಭುತ್ವವನ್ನು ಬಲಪಡಿಸುವುದು
ನಿಜವಾದ ಆಡಳಿತವೆಂದರೆ ಹಗ್ಗದ ಎರಡೂ ತುದಿಗಳ ಸಮತೋಲನವನ್ನು ಕಾಪಾಡುವುದು, ಮನೋಹರ್ ಲಾಲ್ ಸರ್ಕಾರವು ಅದನ್ನು ಅಚ್ಚುಕಟ್ಟಾಗಿ ಮಾಡಿದೆ. ‘7-ಸ್ಟಾರ್ ಗ್ರಾಮ ಪಂಚಾಯತ್ ರೈನ್ಬೋ ಸ್ಕೀಮ್’ ಎಂಬ ಇನ್ನೋವೇಟಿವ್ ಯೋಜನೆಗೆ 73 ನೇ ತಿದ್ದುಪಡಿಯ ನಿಜವಾದ ಉದ್ದೇಶವನ್ನು ಅರಿತುಕೊಳ್ಳುವ ಸಾಮರ್ಥ್ಯವಿದೆ. ಈ ಯೋಜನೆಯು ಹಲವಾರು ನಿಯತಾಂಕಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಪಂಚಾಯಿತಿಗಳನ್ನು ಶ್ರೇಣೀಕರಿಸುತ್ತದೆ ಮತ್ತು ವಿತ್ತೀಯ ಬೆಂಬಲದೊಂದಿಗೆ ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ಕಾರ್ಯಕ್ಷಮತೆಯನ್ನು ಆಧಾರಿತವಾಗಿಸುವ ಮೂಲಕ ಇಡೀ ಚೌಕಟ್ಟಿನ ಡಿಎನ್ಎಯನ್ನು ಹೆಚ್ಚಿಸುತ್ತದೆ. ಇದೇ ವೇಳೆ, ಸ್ವಾಯತ್ತತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಒಟ್ಟು 1,783 ಐಟಿ ಗ್ರಾಮ ಸಚಿವಾಲಯಗಳನ್ನು ಸರ್ಕಾರ ಸ್ಥಾಪಿಸಿದೆ.
ಸಿದ್ಧಾಂತವೇ ಹರಿಯಾಣದ ಯಶಸ್ಸಿನ ಕಥೆ
ರಾಜಕೀಯ ನಿರ್ಧಾರಗಳಿಂದ ಮಾತ್ರವಲ್ಲದೆ, ನಾಯಕನ ವೈಯಕ್ತಿಕ ಮತ್ತು ಭಾವನಾತ್ಮಕ ನಿಯಂತ್ರಣದ ಸಿದ್ಧಾಂತಗಳಿಂದಲೂ ರಾಜ್ಯವು ಬೃಹತ್ ಪರಿವರ್ತನೆಯನ್ನು ಕಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಪೂರ್ಣ ಪ್ರಮಾಣದ ಪ್ರಚಾರಕ ಮತ್ತು ವಿನಮ್ರ ಹಿನ್ನಲೆಯ ವ್ಯಕ್ತಿಯಾಗಿರುವುದರಿಂದ, ಮನೋಹರ್ ಲಾಲ್ ಅವರ ಶಕ್ತಿ ಯಾವಾಗಲೂ ನಿಯಂತ್ರಣದಲ್ಲಿರುತ್ತದೆ ಮತ್ತು ಅವರ ಆಲೋಚನೆಗಳು ತಳಮಟ್ಟದಿಂದಲೇ ಸ್ಪುರಣಗೊಳ್ಳುತ್ತವೆ. ಸಮಾಜದಲ್ಲಿ ಶಾಶ್ವತವಾದ ಪರಿವರ್ತನೆಯನ್ನು ತರುವ ಸಾಮರ್ಥ್ಯವಿರುವ ನಾಯಕನನ್ನು ರೂಪಿಸುವಲ್ಲಿ ಸಿದ್ಧಾಂತ ಮತ್ತು ಮೌಲ್ಯಗಳು ಹೇಗೆ ಪ್ರಮುಖ ಪಾತ್ರವಹಿಸುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.