ನವದೆಹಲಿ: ರಾಷ್ಟ್ರದ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತವು 2019ರ ಬ್ರ್ಯಾಂಡ್ ಫೈನಾನ್ಸ್ ನೇಷನ್ ಶ್ರೇಯಾಂಕದಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿನ ವರ್ಷ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಬಾರಿ 2 ಸ್ಥಾನಗಳ ಸುಧಾರಣೆಯನ್ನು ಕಂಡಿದೆ.
ಬ್ರಾಂಡ್ ಫೈನಾನ್ಸ್ನ ಇತ್ತೀಚಿನ ವರದಿಯ ಪ್ರಕಾರ, ಒಟ್ಟಾರೆ ಬ್ರಾಂಡ್ ಮೌಲ್ಯದಲ್ಲಿ ಭಾರತವು ಶೇಕಡಾ 19 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡು 2.6 ಟ್ರಿಲಿಯನ್ ಡಾಲರ್ಗೆ ತಲುಪಿದೆ. ಈ ಪ್ರತಿಷ್ಠಿತ ಶ್ರೇಯಾಂಕಗಳನ್ನು ಸ್ವತಂತ್ರ ಬ್ರ್ಯಾಂಡ್ ವ್ಯಾಲ್ಯುವೇಶನ್ ಕನ್ಸಲ್ಟೆನ್ಸಿ ಬ್ರಾಂಡ್ ಫೈನಾನ್ಸ್ ಸಿದ್ಧಪಡಿಸುತ್ತದೆ.
ಕಳೆದ ವರ್ಷ 7ನೇ ಸ್ಥಾನವನ್ನು ಪಡೆದಿದ್ದ ಕೆನಡಾ 8ನೇ ಸ್ಥಾನಕ್ಕೆ ಕುಸಿದಿದೆ. 7ನೇ ಸ್ಥಾನ ಈಗ ಭಾರತದ ಪಾಲಾಗಿದೆ. ಅಮೆರಿಕಾ, ಚೀನಾ ಮತ್ತು ಜರ್ಮನಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
ಜಪಾನ್ 4ನೇ ಸ್ಥಾನವನ್ನು, ಯುಕೆ 5ನೇ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕೊರಿಯಾ 9ನೇ ಸ್ಥಾನದಲ್ಲಿದೆ, ಈ ಹಿಂದೆ ಇದು ಹತ್ತನೇ ಸ್ಥಾನದಲ್ಲಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.