ಶ್ರೀನಗರ: ಭಾರತೀಯ ಮೂಲದ ಹಾಂಗ್ಕಾಂಗ್ನಲ್ಲಿ ನೆಲೆಸಿರುವ ಹಿಂದೂ ದಂಪತಿ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಶಾರದಾ ಪೀಠದ ಬಳಿ ಪೂಜೆ ನೆರವೇರಿಸಿದ್ದಾರೆ. ಕಳೆದ 72 ವರ್ಷಗಳಲ್ಲಿ ಇದೇ ಮೊದಲು ಅಲ್ಲಿ ಪೂಜೆ ನೆರವೇರಿಸಲಾಗಿದೆ.
ಪಿ.ವಿ.ವೆಂಕಟರಮಣ ಮತ್ತು ಅವರ ಪತ್ನಿ ಸುಜಾತಾ ಅವರು ಸೇವ್ ಶಾರದಾ ಕಮಿಟಿ ಮತ್ತು ಪಿಒಕೆಯಲ್ಲಿನ ನಾಗರಿಕ ಸಮಾಜದ ಸದಸ್ಯರ ಸಂಘಟಿತ ಪ್ರಯತ್ನಗಳ ಫಲವಾಗಿ ಮಂಜೂರಾದ ಅಧಿಕೃತ ವೀಸಾದ ಮೂಲಕ ಶಾರದಾ ಪೀಠಕ್ಕೆ ಪ್ರಯಾಣಿಸಿದರು. ಆದರೆ ಅಲ್ಲಿ ಪೂಜೆ ಅವಕಾಶ ದೊರೆಯದ ಕಾರಣ ಬಳಿಯಲ್ಲಿರುವ ನದಿ ದಂಡೆಯ ಮೇಲೆ ಪೂಜೆಯನ್ನು ನೆರವೇರಿಸಿದರು, ಶಾರದಾ ದೇವಿ ಮತ್ತು ಸ್ವಾಮಿ ನಂದ್ ಲಾಲ್ ಜಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ವರದಿಗಳ ಪ್ರಕಾರ, ದಂಪತಿಗಳ ಭೇಟಿಯ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರು ನಿಯಂತ್ರಣ ರೇಖೆಯತ್ತ ಮೆರವಣಿಗೆ ನಡೆಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಅಧಿಕಾರಿಗಳು ದಂಪತಿಗೆ ರಕ್ಷಣೆ ನೀಡುವಂತೆ ಪಿಒಕೆ ನಾಗರಿಕ ಸಮಾಜದ ಸದಸ್ಯರಿಗೆ ಮನವಿ ಮಾಡಿಕೊಂಡಿತ್ತು.
ಶಾಂತಿಯುತವಾಗಿ ಪೂಜೆಯನ್ನು ನಡೆಸಿದ ನಂತರ, ದಂಪತಿಗಳು ಶಾರದೆ ಮತ್ತು ಸ್ವಾಮಿ ನಂದ್ ಲಾಲ್ ಅವರ ಫೋಟೋಗಳನ್ನು ನಾಗರಿಕ ಸಮಾಜದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ, ಪ್ರಸ್ತುತ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆ ನಿಂತು ಹೋದ ನಂತರ ಫೋಟೋಗಳನ್ನು ಪೀಠದ ಬಳಿ ಸ್ಥಾಪಿಸಿ ಎಂದು ಇವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
2019 ರಲ್ಲಿ ಡಾ. ರಮೇಶ್ ವಾಂಕ್ವಾನಿ ನೇತೃತ್ವದ ಅವರ ಐವರು ಭಾರತೀಯ ಅಧಿಕಾರಿಗಳು ನಿಯೋಗವು ಪಾಕಿಸ್ಥಾನ ಹಿಂದೂ ಕೌನ್ಸಿಲ್ (ಪಿಎಚ್ಸಿ) ನೊಂದಿಗೆ ಸಮನ್ವಯ ಸಾಧಿಸಿ 2019 ರ ಜೂನ್ 24 ರಂದು ಶಾರದಾ ಪೀಠ ಭೇಟಿಕ್ಕೆ ನೀಡಿತ್ತು.
First time in 72 years, a Hindu couple went near #SharadaPeeth on the Pakistani side of Jammu and Kashmir, & conducted Sharada puja on the banks of Kishanganga (Neelum) during Navaratri.
Thanks PT Venkataraman & Sujata. 100km south of Sharada Shakti peeth, but a great restart 🙏 pic.twitter.com/EuSEVHIro8
— Kiran Kumar S (@KiranKS) October 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.