ಲಕ್ನೋ: CSIR-CIMAP ವಿಜ್ಞಾನಿಗಳು ಹೈಬ್ರಿಡ್ ತುಳಸಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಅಡಿಕೆ, ಲವಂಗ, ನಿಂಬೆ ಮುಂತಾದ ಸುವಾಸನೆಯುಳ್ಳ ರೂಪದಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ.
“ತುಳಸಿಯ ಪ್ರಯೋಜನವೆಂದರೆ ಅದನ್ನು ಸುಲಭವಾಗಿ ಬೆಳೆಸಬಹುದು ಮತ್ತು ಅದು ರೋಗ ನಿರೋಧಕವಾಗಿದೆ. ಹೈಬ್ರಿಡ್ ತುಳಸಿ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ” ಎಂದು ಸಿಐಎಎಂಪಿಯ ಡೈರೆಕ್ಟರ್ ಡಾ. ಅಬ್ದುಲ್ ಸಮದ್ ಹೇಳಿದ್ದಾರೆ.
ಕೇವಲ 70 ದಿನಗಳಲ್ಲಿ ಹೈಬ್ರಿಡ್ ತುಳಸಿಯನ್ನು ಬೆಳಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
“ಹೈಬ್ರಿಡ್ ಮಾರ್ಪಾಡು ಪ್ರಕ್ರಿಯೆಯನ್ನು ನಡೆಸಿ ಎರಡು ತಳಿಗಳನ್ನು ಮಿಶ್ರ ಮಾಡಿದೆ. ಈ ಸಂಯೋಜನೆಯಿಂದ ಬಂದ ಉಪ ಉತ್ಪನ್ನ ನಿಜಕ್ಕೂ ಅದ್ಭುತ ಮತ್ತು ಲಾಭದಾಯಕವಾಗಿದೆ. ಪಾನ್ ತಯಾರಿಸಲು ಬಳಸುವ ಎಲ್ಲಾ ವಸ್ತುಗಳ ಅಂಶಗಳು ಇದರಲ್ಲಿದೆ. ಇತರ ಸುವಾಸನೆಯ ತುಳಸಿ ಕೂಡ ಸಾಕಷ್ಟು ಪ್ರಯೋಜನಕಾರಿಯಾಗಿದೆ” ಎಂದು CIMAP ವಿಜ್ಞಾನಿ ಡಾ.ಚಂದನ್ ಸಿಂಗ್ ಹೇಳಿದ್ದಾರೆ.
ಪಾನ್ ತುಳಸಿಯನ್ನು ಸೇವಿಸಿದಾಗ ಜನರಿಗೆ ಪಾನ್ ತಿಂದ ಅನುಭವವೂ ಸಿಗುತ್ತದೆ ಮತ್ತು ಆರೋಗ್ಯ ಲಾಭವೂ ಸಿಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.