ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಗೆ ಮಹತ್ವದ ಜಯ ಸಿಗುತ್ತಿದೆ, ಗೂಗಲ್ ಮ್ಯಾಪ್ ಕೂಡ ಭಾರತದ 2,300 ನಗರಗಳಲ್ಲಿನ 57 ಸಾವಿರ ಸಾರ್ವಜನಿಕ ಶೌಚಾಲಯಗಳನ್ನು ಪಟ್ಟಿ ಮಾಡಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಬಗ್ಗೆ ಗೂಗಲ್ ಘೋಷಣೆ ಮಾಡಿದೆ.
ಈಗಾಗಲೇ 2.5 ಲಕ್ಷ ಬಳಕೆದಾರರು ಪ್ರತಿ ತಿಂಗಳು ಸಾರ್ವಜನಿಕ ಶೌಚಾಲಯಗಳನ್ನು ಗೂಗಲ್ ಸರ್ಚ್ನಲ್ಲಿ ಮತ್ತು ಗೂಗಲ್ ಮ್ಯಾಪಿನಲ್ಲಿ ಹುಡುಕಾಡುತ್ತಿದ್ದಾರೆ.
ಗೂಗಲ್ ಮ್ಯಾಪ್ಗಳಿಗೆ ಸಾರ್ವಜನಿಕ ಶೌಚಾಲಯಗಳನ್ನು ಸೇರಿಸುವುದನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ನವದೆಹಲಿ, ಭೋಪಾಲ್ ಮತ್ತು ಇಂದೋರ್ನಲ್ಲಿ 2016 ರಲ್ಲಿ ಸ್ವಚ್ಛಭಾರತ್ ಮಿಷನ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಪ್ರಾರಂಭಿಸಲಾಯಿತು.
“ಸಾರ್ವಜನಿಕ ನೈರ್ಮಲ್ಯ ಸೌಲಭ್ಯಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಸಾಮಾಜಿಕ ಒಳಿತಿಗಾಗಿನ ಒಂದು ಪ್ರಮುಖ ಅಂಶವಾಗಿದೆ ಎಂದು ನಾವು ನಂಬುತ್ತೇವೆ. ಇದು ಸ್ವಚ್ಛತೆಯ ಅಭ್ಯಾಸ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆ ಮೂಲಾಧಾರವಾಗಿದೆ” ಎಂದು ಗೂಗಲ್ ಮ್ಯಾಪಿನ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಅನಲ್ ಘೋಷ್ ಹೇಳಿದ್ದಾರೆ.
ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಅಥವಾ ಗೂಗಲ್ ಮ್ಯಾಪಿನಲ್ಲಿ ಪಬ್ಲಿಕ್ ಟಾಯ್ಲೆಟ್ಸ್ ನಿಯರ್ ಮಿ ಎಂದು ಟೈಪಿಸಿದರೆ ಬೆರಳ ತುದಿಯಲ್ಲೇ ಫಲಿತಾಂಶಗಳು ಬರುತ್ತವೆ.
“ಈ ಅಭಿಯಾನಕ್ಕಾಗಿ, ನಮ್ಮ ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳು ಒಟ್ಟಾಗಿ ಶೌಚಾಲಯ ಪಟ್ಟಿಗಳನ್ನು ಗೂಗಲ್ ಮ್ಯಾಪಿನಲ್ಲಿ ಸಂಯೋಜಿಸಲು ಹೊಸ ಪ್ರಕ್ರಿಯೆಯನ್ನು ನಿರ್ಮಿಸಿವೆ” ಎಂದು ಘೋಷ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.