ನವದೆಹಲಿ: ಭಾರತದಲ್ಲಿ ವಾಹನಗಳನ್ನು ಉತ್ಪಾದಿಸಲು, ಮಾರಾಟ ಮಾಡಲು ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೆ ರಫ್ತು ಮಾಡುವ ಸಲುವಾಗಿ ಫೋರ್ಡ್ ಮೋಟರ್ ಕೊ ಮತ್ತು ಮಹೀಂದ್ರ & ಮಹೀಂದ್ರ $275 ಮಿಲಿಯನ್ ಮೊತ್ತದ ಜಂಟಿ ಉದ್ಯಮ ಪಾಲುದಾರಿತ್ವವನ್ನು ಮಾಡಿಕೊಳ್ಳಲು ಮುಂದಾಗಿವೆ.
ಕಳೆದ ಒಂದು ತಿಂಗಳುಗಳಿಂದ ಎರಡೂ ಕಂಪನಿಗಳು ವ್ಯಾಪಾರ ಕುದುರಿಸುವ ಬಗ್ಗೆ ಮಾತುಕತೆಯಲ್ಲಿ ತೊಡಗಿಕೊಂಡಿದೆ, ಹೊಸ ಸಂಸ್ಥೆಯಲ್ಲಿ ಫೋರ್ಡ್ ಶೇ.49ರಷ್ಟು ಷೇರನ್ನು ಹೊಂದಲಿದೆ ಮತ್ತು ದೇಶದಲ್ಲಿನ ತನ್ನ ಹಲವಾರು ಸ್ವತಂತ್ರ ಸ್ಥಳೀಯ ಕಾರ್ಯಾಚರಣೆಗಳನ್ನು ಅಂತ್ಯಗೊಳಿಸಲಿದೆ.
ಒಪ್ಪಂದವು 2020ರ ಮಧ್ಯದ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಪೋರ್ಡ್ ದೇಶದಲ್ಲಿ ತನ್ನ ಕಾರು ಉತ್ಪಾದನಾ ಘಟಕ ಮತ್ತು ಉದ್ಯೋಗಿಗಳು ಸೇರಿದಂತೆ ಸ್ಥಳಿಯ ಅಟೊಮೊಟಿವ್ ಆಸ್ತಿಗಳನ್ನು ಹೊಸ ಸಂಸ್ಥೆಗೆ ಹಸ್ತಾಂತರ ಮಾಡಲಿದೆ.
ಲಾಭ ಗಳಿಸುವಂತೆ ಷೇರುದಾರರಿಂದ ಒತ್ತಡಕ್ಕೆ ಸಿಲುಕಿರುವ ಫೋರ್ಡ್ ಮುಂದಿನ ಕೆಲವು ವರ್ಷಗಳಲ್ಲಿ $11 ಬಿಲಿಯನ್ ಉಳಿತಾಯ ಮಾಡುವ ಗುರಿಯೊಂದಿಗೆ ಜಾಗತಿಕವಾಗಿ ತನ್ನ ವ್ಯವಹಾರಗಳನ್ನು ಪುನರ್ ರಚನೆ ಮಾಡುತ್ತಿದೆ.
ಜಂಟಿ ಉದ್ಯಮಕ್ಕೆ ಬದಲಾಗುವ ಮೂಲಕ, ಫೋರ್ಡ್ ತನ್ನ ಭಾರತದ ಕಾರ್ಯತಂತ್ರವನ್ನು ಬದಲಾಯಿಸುತ್ತಿದೆ. ಏಷ್ಯಾದ ಕಾರು ತಯಾರಕರಾದ ಸುಜುಕಿ ಮೋಟರ್ ಕಾರ್ಪ್ ಮತ್ತು ಹ್ಯುಂಡೈ ಮೋಟಾರ್ ಕೋ ಪ್ರಾಬಲ್ಯವಿರುವ, ಭಾರತದ ಮಾರುಕಟ್ಟೆಯಲ್ಲಿ ಇತರರು ಹಣ ಮಾಡಲು ಹೆಣಗಾಡುತ್ತಿದ್ದ ಪರಿಸ್ಥಿತಿಯಲ್ಲೂ ಫೋರ್ಡ್ ಸ್ವತಂತ್ರ ಕಾರ್ಯಾಚರಣೆಯನ್ನು ನಡೆಸುತ್ತಾ ಬಂದಿದೆ. ಇದೀಗ ಅದು ತನ್ನ ಕಾರ್ಯತಂತ್ರವನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ.
“ಮಹೀಂದ್ರ & ಮಹೀಂದ್ರ ಮತ್ತು ಫೋರ್ಡ್ನ ಬಲವಾದ ಮೈತ್ರಿಯು, ನಾವು ನಮ್ಮ ದೃಷ್ಟಿಯನ್ನು ಸಾಧಿಸುವುದನ್ನು ಮುಂದುವರೆಸಲು ಮತ್ತು ಅದೇ ಸಮಯದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ನಮ್ಮ ಜಾಗತಿಕ ಪಾಲುದಾರರಿಗೆ ಮೌಲ್ಯವನ್ನು ತಲುಪಿಸಲು ಸಾಮರ್ಥ್ಯ ತುಂಬುತ್ತದೆ ಎಂದು ಭರವಸೆ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ” ಎಂದು ಫೋರ್ಡ್ ಅಧ್ಯಕ್ಷ ಮತ್ತು ಸಿಇಒ ಜಿಮ್ ಹ್ಯಾಕೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹೀಂದ್ರವು ಹೊಸ ಜಂಟಿ ಸಂಸ್ಥೆಯನ್ನು ನಿರ್ವಹಣೆ ಮಾಡಲಿದೆ, ಭಾರತದಲ್ಲಿ ಫೋರ್ಡ್ ಬ್ರಾಂಡ್ ವಾಹನಗಳನ್ನು ಅಭಿವೃದ್ಧಿಪಡಿಸಲಿದೆ ಮತ್ತು ಮಾರಾಟ ಮಾಡಲಿದೆ ಮತ್ತು ಫೋರ್ಡ್ ಮತ್ತು ಮಹೀಂದ್ರ ಬ್ರಾಂಡ್ ವಾಹನಗಳನ್ನು ಉದಯೋನ್ಮುಖ ಮಾರುಕಟ್ಟೆಗಳಿಗೆ ರಫ್ತು ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.