ಔರಂಗಬಾದ್: ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ಪರಮಾಣು ಯುದ್ಧ ನಡೆಸುವುದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬೆದರಿಕೆಯೊಡ್ಡಿರುವುದಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, “ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಯಾವಾಗ ಹಸ್ತಾಂತರ ಮಾಡುತ್ತಾರೆ ಎಂಬುದೇ ಆ ದೇಶದೊಂದಿಗೆ ಮಾತುಕತೆ ನಡೆಸಲು ಈಗ ಉಳಿದಿರುವ ಏಕೈಕ ವಿಷಯ” ಎಂದಿದ್ದಾರೆ.
ಕಾಶ್ಮೀರದಲ್ಲಿ ಸಾವಿರಾರು ಜನರನ್ನು ಕರ್ಫ್ಯೂ ಅಡಿಯಲ್ಲಿ ಇಡಲಾಗಿದೆ ಎಂಬ ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟನ್ನು ನೀಡಿರುವ ಅವರು, ಕೇವಲ 200-300 ಮಂದಿಯನ್ನು ಮುಂಜಾಗೃತಾ ಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಔರಂಗಬಾದಿನಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ” 370ನೇ ವಿಧಿಯನ್ನು ರದ್ದುಪಡಿಸಿದ ಸಂದರ್ಭದಲ್ಲಿ 2000-3000 ಜನರನ್ನು ಮುಂಜಾಗೃತ ಕ್ರಮವಾಗಿ ಗೃಹ ಬಂಧನದಲ್ಲಿ ಇಡಲಾಗಿತ್ತು, ಪ್ರಸ್ತುತ 200-300 ಮಂದಿ ಬಂಧನದಲ್ಲಿದ್ದಾರೆ. ಈ 200-300 ಮಂದಿಯ ಆಶಯಕ್ಕೂ, ಕಾಶ್ಮೀರಿಗಳ ಆಶಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದಿದ್ದಾರೆ.
“ಪಾಕಿಸ್ಥಾನದೊಂದಿಗೆ ಚರ್ಚಿಸಲು ಉಳಿದಿರುವ ಏಕೈಕ ಅಂಶವೆಂದರೆ ಅವರು ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತಕ್ಕೆ ಹಸ್ತಾಂತರಿಸುವುದು ಯಾವಾಗ ಎಂಬುದು ಮಾತ್ರ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ಥಾನದ ನಡುವಿನ ಅತೀ ಮುಖ್ಯ ವಿಷಯವೆಂದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಸ್ಥಿತಿಗತಿ ಮಾತ್ರ” ಎಂದು ಅವರು ಪ್ರತಿಪಾದಿಸಿದ್ದಾರೆ.
“ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ 200-250 ಜನರನ್ನು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಬಂಧನದಲ್ಲಿರಿಸಲಾಗಿದೆ. ಅವರನ್ನು ಗೌರವಯುತವಾಗಿ ಮುಂಜಾಗೃತ ಬಂಧನದಲ್ಲಿಡಲಾಗಿದೆ. ಕೆಲವರು ಫೈವ್ ಸ್ಟಾರ್ ಅತಿಥಿ ಗೃಹಗಳಲ್ಲಿದ್ದಾರೆ, ಇನ್ನೂ ಕೆಲವರು ಫೈವ್ ಸ್ಟಾರ್ ಹೋಟೆಲ್ಗಳಲ್ಲಿದ್ದಾರೆ” ಎಂದು ಮಾಧವ್ ಹೇಳಿದ್ದಾರೆ.
“ಕಳೆದ ಎರಡು ತಿಂಗಳುಗಳಿಂದ 200-250 ಜನರನ್ನು ಬಂಧನದಲ್ಲಿಡಲಾಗಿದೆ ಮತ್ತು ಎರಡು ತಿಂಗಳುಗಳಿಂದ ಕಾಶ್ಮೀರದಲ್ಲಿ ಶಾಂತಿ ಇದೆ ಎಂದು ನಾನು ಹೇಳಲು ಬಯಸುತ್ತೇನೆ. ಕಾಶ್ಮೀರದ ಜನರು ಏನು ಬಯಸುತ್ತಾರೆ ಮತ್ತು ಈ 200-250 ಜನರಿಗೆ ಏನು ಬೇಕು ಎಂಬುದನ್ನು ಈಗ ನಾವೇ ಅರ್ಥಮಾಡಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.