ದೋಹಾ: ಕತಾರ್ನ ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಜಾವೆಲಿನ್ ಪಟು ಅನ್ನು ರಾಣಿ ಅವರು ಫೈನಲ್ ಪ್ರವೇಶಿಸಿದ್ದಾರೆ. 27 ವರ್ಷದ ಅವರು, ಎರಡನೇ ಸುತ್ತಿನಲ್ಲಿ 62.43ಮೀ ಎಸೆಯುವ ಮೂಲಕ ತಮ್ಮದೇ ಹಿಂದಿನ ರಾಷ್ಟ್ರೀಯ ದಾಖಲೆ 62.34ಮೀ ಅನ್ನು ಪುಡಿಗಟ್ಟಿದ್ದಾರೆ.
ಫೈನಲ್ ಪಂದ್ಯಾಟ ಇಂದು ಜರುಗಲಿದೆ.
ಅನ್ನು ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ಮಹಿಳಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್ಗೆ ತಲುಪಿದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಎ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಅವರು ಫೈನಲ್ಗೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾದರು ಮತ್ತು ಅರ್ಹತಾ ಸುತ್ತಿನ ಐದನೇ ಅತ್ಯುತ್ತಮ ಸಾಧಕರಾಗಿ ಅವರು ಹೊರಹೊಮ್ಮಿದ್ದಾರೆ.
ಏಷ್ಯಾದ ಚಾಂಪಿಯನ್ ಚೀನಾದ ಲ್ಯು ಹುಯಿಹುಯಿ (67.27 ಮೀ) ಮತ್ತು ಜರ್ಮನಿಯ ಕ್ರಿಸ್ಟಿನ್ ಹುಸೊಂಗ್ ಮಾತ್ರ 63.50 ಮೀಟರ್ನ ಸ್ವಯಂಚಾಲಿತವಾಗಿ ಅರ್ಹತಾ ಗಡಿಯನ್ನು ದಾಟುವ ನಿರೀಕ್ಷೆಯಿದೆ. ಅಂತಿಮ 12 ರಲ್ಲಿ ಭಾಗವಹಿಸುವ ಅನ್ನು ಮತ್ತು ಇತರ 9 ಮಂದಿ ಫೈನಲ್ನಲ್ಲಿ ಸ್ಪರ್ಧಿಸಲಿದ್ದಾರೆ. ತನ್ನ ಮೊದಲ ಎಸೆತದಲ್ಲಿ, ಅನ್ನು 57.05 ಮೀಟರ್ ದೂರವನ್ನು ಮುಟ್ಟಲು ಯಶಸ್ವಿಯಾದರೆ, ತನ್ನ ಮೂರನೇ ಮತ್ತು ಅಂತಿಮ ಎಸೆತದಲ್ಲಿ 60.50 ಮೀ ತಲುಪಲು ಯಶಸ್ವಿಯಾಗಿದ್ದಾರೆ. ಎ ಗುಂಪಿನಲ್ಲಿ, ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ಲಿಯು ಶಿಯಿಂಗ್ (63.48 ಮೀ) ಮತ್ತು ಸ್ಲೊವೇನಿಯಾದ ರತೇಜ್ ಮಾರ್ಟಿನಾ (62.87 ಮೀ) ಅನ್ನು ಅವರಿಗಿಂತ ಮುಂದಿದ್ದಾರೆ.
ವಿಶ್ವ ಅಥ್ಲೀಟಿಕ್ ಚಾಂಪಿಯನ್ಶಿಪ್ನಲ್ಲಿ ಸೋಮವಾರ ಸ್ಪರ್ಧಿಸಿದ ಇತರ ಇಬ್ಬರು ಭಾರತೀಯ ಕ್ರೀಡಾಪಟುಗಳಾದ ಅರ್ಚನಾ ಸುಶೀಂದ್ರನ್ ಮತ್ತು ಅಂಜಲಿ ದೇವಿ ಕ್ರಮವಾಗಿ ಮಹಿಳಾ 200 ಮೀ ಮತ್ತು 400 ಮೀಟರ್ ಓಟದಲ್ಲಿ ಮೊದಲ ಸುತ್ತನ್ನು ದಾಟಿ ಮುಂದೆ ಸಾಗುವಲ್ಲಿ ಯಶಸ್ವಿಯಾಗಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.