ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಮೆರಿಕದಾದ್ಯಂತ ತಮಿಳು ಭಾಷೆ ಪ್ರತಿಧ್ವನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮಿಳು ಕವಿಯ ವಾಕ್ಯಗಳನ್ನು ತಾನು ಉಲ್ಲೇಖ ಮಾಡಿರುವುದನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿದ ಮೋದಿ ಅವರು ವಿಮಾನನಿಲ್ದಾಣದಲ್ಲಿ ತನ್ನನ್ನು ಬರ ಮಾಡಿಕೊಳ್ಳಲು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. “ತಮಿಳು ಪ್ರಾಚೀನ ಭಾಷೆಗಳಲ್ಲಿ ಒಂದು ಎಂಬುದನ್ನು ಎಲ್ಲರಿಗೂ ತಿಳಿಸಲು ನಾನು ಮುಂದಾದೆ” ಎಂದಿದ್ದಾರೆ.
“ನಾನು ಅಮೆರಿಕಾದಲ್ಲಿ ತಂಗಿದ್ದಾಗ, ಒಂದು ಬಾರಿ ತಮಿಳು ಭಾಷೆಯಲ್ಲಿ ಮಾತನಾಡಿದ್ದೇನೆ ಮತ್ತು ಇದು ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂದು ಎಲ್ಲರಿಗೂ ಹೇಳಿದ್ದೇನೆ. ಇಂದಿಗೂ ತಮಿಳು ಭಾಷೆ ಇಡೀ ಅಮೆರಿಕಾದಲ್ಲಿ ಪ್ರತಿಧ್ವನಿಸುತ್ತಿದೆ” ಎಂದರು. ತಮಿಳು ಭಾಷೆಯಲ್ಲೇ ತಮ್ಮ ಸಂಕ್ಷಿಪ್ತ ಭಾಷಣವನ್ನು ಪ್ರಾರಂಭಿಸಿದ ಮೋದಿ, ಎಲ್ಲರಿಗೂ ವಣಕ್ಕಂ ಎಂದರು, ಈ ವೇಳೆ ಜನರಿಂದ ಜೋರಾಗಿ ಹರ್ಷೋದ್ಗಾರ ಮೊಳಗಿತು.
ಒಂದು ವಾರಗಳ ಯುಎಸ್ ಭೇಟಿಯಲ್ಲಿದ್ದ ಮೋದಿಯವರು, ಭಾರತದಲ್ಲಿನ ಭಾಷೆಗಳ ವೈವಿಧ್ಯತೆಯ ಬಗ್ಗೆ ಕನಿಷ್ಠ ಮೂರು ಸಾರ್ವಜನಿಕ ಉಲ್ಲೇಖಗಳನ್ನು ಮಾಡಿದ್ದಾರೆ.
ಶುಕ್ರವಾರ ವಿಶ್ವಸಂಸ್ಥೆಯನ್ನುದ್ದೇಶಿಸಿ ಮಾತನಾಡಿದ್ದ ವೇಳೆ, ಪ್ರಧಾನ ಮಂತ್ರಿ ಸಾರ್ವತ್ರಿಕ ಭ್ರಾತೃತ್ವದ ಅಗತ್ಯವನ್ನು ಒತ್ತಿಹೇಳಿದ್ದರು ಮತ್ತು ಮೂರು ಸಾವಿರ ವರ್ಷಗಳ ಹಿಂದೆ ಬದುಕಿದ್ದ ತಮಿಳು ಕವಿ ಕಾನಿಯನ್ ಪುಂಗುಂದ್ರನಾರ್ ಅವರನ್ನು ಉಲ್ಲೇಖಿಸಿ “ನಾವು ಎಲ್ಲಾ ಸ್ಥಳಗಳಿಗೆ ಸೇರಿದವರು ಮತ್ತು ಎಲ್ಲರಿಗೂ ಸೇರಿದವರು” ಎಂದು ಪ್ರತಿಪಾದಿಸಿದ್ದರು. ತಾವು ನಡೆಸಿದ್ದ ಬ್ಯುಸಿನೆಸ್ ಫೋರಂ ಮತ್ತು ಹೌಡಿ ಮೋದಿ ಕಾರ್ಯಕ್ರಮಗಳಲ್ಲೂ ಅವರು ಭಾರತದ ಭಾಷಾ ವೈವಿಧ್ಯತೆಯ ಬಗ್ಗೆ ಉಲ್ಲೇಖಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.