ಕೊಚ್ಚಿ: ಪ್ರಯಾಣಿಕರಿಗೆ ನೀಡುವ ಸೇವೆಗಳ ದೃಷ್ಟಿಯಿಂದ ಕೊಚ್ಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಸಿಐಎಎಲ್) ಅನ್ನು ಅತ್ಯುತ್ತಮ ವಿಮಾನ ನಿಲ್ದಾಣವೆಂದು ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ಗುರುತಿಸಿದೆ.
ಎಸಿಐ ನಡೆಸಿದ ವಾರ್ಷಿಕ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎಎಸ್ಕ್ಯೂ) ಸಮೀಕ್ಷೆಯ ಆಧಾರದಲ್ಲಿ ಕೊಚ್ಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಏಷ್ಯಾ ಪೆಸಿಫಿಕ್ ಪ್ರದೇಶದ 5-15 ಮಿಲಿಯನ್ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಸ್ಥಾನ ಪಡೆದುಕೊಂಡಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಎರಡನೇ ವಾರ್ಷಿಕ ಎಸಿಐ ಗ್ರಾಹಕ ಅನುಭವ ಜಾಗತಿಕ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪ್ರದಾನಿಸಲಾಯಿತು.
ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿಗಳು ಅತ್ಯುತ್ತಮ ಗ್ರಾಹಕ ಅನುಭವವನ್ನು ನೀಡುವಲ್ಲಿ ವಿಮಾನ ನಿಲ್ದಾಣಗಳ ಸಾಧನೆಗಳನ್ನು ಪರಿಗಣಿಸುತ್ತದೆ ಎಂದು ಎಸಿಐ ಮಹಾನಿರ್ದೇಶಕ ಜನರಲ್ ಏಂಜೆಲಾ ಗಿಟೆನ್ಸ್ ಹೇಳಿದ್ದಾರೆ.
ಎಸಿಐ ನಡೆಸುವ ಸಮೀಕ್ಷೆಯು ವಿಶ್ವ ಪ್ರಸಿದ್ಧವಾಗಿದೆ ಮತ್ತು ಇದು ಸ್ಥಾಪಿತ ವಿಮಾನ ನಿಲ್ದಾಣಗಳ ಸೇವೆಯ ಗುಣಮಟ್ಟದ ಮಾನದಂಡವನ್ನು ಅಳೆಯುವ ಕಾರ್ಯಕ್ರಮವಾಗಿದೆ. ಪ್ರಯಾಣಿಕರ ತೃಪ್ತಿಯನ್ನು ಇಲ್ಲಿ ಅಳೆಯಲಾಗುತ್ತದೆ. ಪ್ರಯಾಣಿಕರ ಸೇವೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅದರಲ್ಲಿ ಸುಧಾರಣೆಯನ್ನು ತರುವ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಮಾನ ನಿಲ್ದಾಣಗಳಿಗಾಗಿ ವಿನ್ಯಾಸಪಡಿಸಿದ ಸಮೀಕ್ಷೆ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.