ನವದೆಹಲಿ: ಫೋರ್ಬ್ಸ್ನ ವಿಶ್ವದ ಅತ್ಯುತ್ತಮ ಗೌರವ ಪಡೆದ ಕಂಪನಿಗಳ ಪಟ್ಟಿಯಲ್ಲಿ ಭಾರತದ ಇನ್ಫೋಸಿಸ್ ಟಾಪ್ 5ರ ಸ್ಥಾನ ಪಡೆದುಕೊಂಡಿದೆ. ಇಟಾಲಿಯನ್ ಕಾರು ತಯಾರಕ ಫೆರಾರಿ ಮೊದಲ ಸ್ಥಾನವನ್ನು ಮತ್ತು ಪಾವತಿ ತಂತ್ರಜ್ಞಾನದ ದಿಗ್ಗಜ ವೀಸಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ಫೋಸಿಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಟಾಪ್ 50 ರ ಸ್ಥಾನದಲ್ಲಿ ಭಾರತದ ಇನ್ನೆರಡು ಕಂಪನಿಗಳು ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 22 ನೇ ಸ್ಥಾನದಲ್ಲಿದ್ದರೆ, ಟಾಟಾ ಮೋಟಾರ್ಸ್ 31 ನೇ ಸ್ಥಾನದಲ್ಲಿದೆ.
ಫೋರ್ಬ್ಸ್ ಜರ್ಮನಿಯ ಸ್ಟ್ಯಾಟಿಸ್ಟಿಕ್ ಕಂಪನಿ ಸ್ಟ್ಯಾಟಿಸ್ಟಾದೊಂದಿಗೆ ಒಪ್ಪಂದ ಮಾಡಿಕೊಂಡು, ಜಗತ್ತಿನಾದ್ಯಂತ 2000 ಅತಿದೊಡ್ಡ ಸಾರ್ವಜನಿಕ ಕಂಪನಿಗಳ ಪಟ್ಟಿಯನ್ನು ಪರಿಶೀಲಿಸಿ 250 ಅತ್ಯುತ್ತಮ ಕಂಪನಿಗಳನ್ನು ಆಯ್ಕೆ ಮಾಡಿಕೊಂಡಿದೆ. ವಿಶ್ವಾಸಾರ್ಹತೆ, ಸಾಮಾಜಿಕ ನಡವಳಿಕೆ, ಉತ್ಪನ್ನಗಳು ಮತ್ತು ಸೇವೆಗಳ ಶಕ್ತಿ ಮತ್ತು ಉದ್ಯೋಗದಾತರಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬ ಆಧಾರದ ಮೇಲೆ ಪಟ್ಟಿಯಲ್ಲಿ ಸಿದ್ಧಪಡಿಸಲಾಗಿದೆ.
ಫೋರ್ಬ್ಸ್ ಪ್ರಕಾರ, ಸ್ಟ್ಯಾಟಿಸ್ಟಾ ಕನಿಷ್ಠ 50 ದೇಶಗಳಿಂದ 15,000 ಕ್ಕೂ ಹೆಚ್ಚು ಪ್ರತಿಕ್ರಿಯೆದಾರರನ್ನು ಸಮೀಕ್ಷೆಗೆ ಒಳಪಡಿಸಿದೆ.
ಇನ್ಫೋಸಿಸ್ ಕಳೆದ ವರ್ಷ 31 ನೇ ಸ್ಥಾನದಲ್ಲಿತ್ತು, ಆದರೆ ಈ ಬಾರಿಗೆ 3ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ.
ಈ ವರ್ಷದ ಪಟ್ಟಿಯಲ್ಲಿ, ನೆಟ್ಫ್ಲಿಕ್ಸ್ 4ನೇ, ಪೇಪಾಲ್ 5ನೇ, ಮೈಕ್ರೋಸಾಫ್ಟ್ 6ನೇ, ವಾಲ್ಟ್ ಡಿಸ್ನಿ 7ನೇ, ಟೊಯೋಟಾ ಮೋಟಾರ್ 9ನೇ, ಮಾಸ್ಟರ್ಕಾರ್ಡ್ 9ನೇ ಮತ್ತು ಕಾಸ್ಟ್ಕೊ ಹೋಲ್ಸೇಲ್ 10 ನೇ ಸ್ಥಾನದಲ್ಲಿದೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇತರ ಕಂಪನಿಗಳೆಂದತೆ ಟಾಟಾ ಸ್ಟೀಲ್ 105ನೇ ಸ್ಥಾನ, ಲಾರ್ಸೆನ್ ಆ್ಯಂಡ್ ಟೌಬ್ರೊ 115ನೇ ಸ್ಥಾನ, ಮಹೀಂದ್ರಾ ಆ್ಯಂಡ್ ಮಹೀಂದ್ರಾ 117ನೇ, ಎಚ್ಡಿಎಫ್ಸಿ 135ನೇ, ಬಜಾಜ್ ಫಿನ್ಸರ್ವ್ 143ನೇ, ಪಿರಮಲ್ ಎಂಟರ್ಪ್ರೈಸಸ್ 149ನೇ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ 153ನೇ, ಎಚ್ಸಿಎಲ್ ಟೆಕ್ನಾಲಜೀಸ್ 155ನೇ, ಹಿಂಡಾಲ್ಕೊ ಇಂಡಸ್ಟ್ರೀಸ್ 157ನೇ, ವಿಪ್ರೋ 168ನೇ, ಎಚ್ಡಿಎಫ್ಸಿ ಬ್ಯಾಂಕ್ 204 ನೇ, ಸನ್ ಫಾರ್ಮಾ ಇಂಡಸ್ಟ್ರೀಸ್ 217 ನೇ, ಜನರಲ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ 224ನೇ, ಐಟಿಸಿ 231ನೇ ಮತ್ತು ಏಷ್ಯನ್ ಪೇಂಟ್ಸ್ 248ನೇ ಸ್ಥಾನವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.