ನ್ಯೂಯಾರ್ಕ್: ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಚೆನ್ನಾಗಿಯೇ ನಿಭಾಯಿಸುವ ಸಾಮರ್ಥ್ಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದೂ ಎಂದೂ ಅವರು ತಿಳಿಸಿದ್ದಾರೆ.
“ಪಾಕಿಸ್ಥಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ನಾನು ಯಾವುದೇ ಸಂದೇಶವನ್ನು ರವಾನಿಸಬೇಕಾಗಿಲ್ಲ, ಯಾಕೆಂದರೆ ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟವಾದ ಎಚ್ಚರಿಕೆಯನ್ನು ರವಾನಿಸಿದ್ದಾರೆ” ಎಂದು ಟ್ರಂಪ್ ಹೇಳಿದ್ದಾರೆ. ‘ಹೌಡಿ, ಮೋದಿ’ ಕಾರ್ಯಕ್ರಮದಲ್ಲಿ ಮೋದಿಯವರು ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ರವಾನಿಸಿದ ಹಿನ್ನಲೆಯಲ್ಲಿ ಈ ಮಾತನ್ನು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮೋದಿಯೊಂದಿಗಿನ ಭೇಟಿಗೂ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಪಾಕಿಸ್ಥಾನಕ್ಕೆ ಯಾವುದೇ ಸಂದೇಶವನ್ನು ನೀಡುವುದಿಲ್ಲ, ಈಗಾಗಲೇ ಮೋದಿ ಸಾಕಷ್ಟು ಗಟ್ಟಿಯಾಗಿ ಸಂದೇಶವನ್ನು ರವಾನಿಸಿದ್ದಾರೆ” ಎಂದು ಹೇಳಿದ್ದಾರೆ.
ಮೋದಿಯನ್ನು ಬಹುವಾಗಿ ಹೊಗಳಿರುವ ಟ್ರಂಪ್, ದೇಶವನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿರುವ ಮೋದಿಯನ್ನು ‘ಆಧುನಿಕ ಭಾರತದ ರಾಷ್ಟ್ರಪಿತ’ ಎಂದೂ ಬಣ್ಣಿಸಿದ್ದಾರೆ. ಅಲ್ಲದೇ ರಾಕ್ಸ್ಟಾರ್ ಎಲ್ವಿಸ್ ಪ್ರೆಸ್ಲೆ ಅವರಿಗೂ ಹೋಲಿಸಿದ್ದಾರೆ. ಹೋಸ್ಟನ್ನಲ್ಲಿ ಭಾರೀ ಪ್ರಮಾಣದ ಜನಸಮುದಾಯವನ್ನು ಸೇರಿಸಿದ್ದಕ್ಕಾಗಿ ಮೋದಿಯನ್ನು ರಾಕ್ಸ್ಟಾರ್ಗೆ ಅವರು ಹೋಲಿಸಿದ್ದಾರೆ.
ಈ ವೇಳೆ ಟ್ರಂಪ್ ಪಕ್ಕದಲ್ಲಿ ಕುಳಿತಿದ್ದ ಮೋದಿ, ಭಾರತಕ್ಕೆ ಟ್ರಂಪ್ ನೀಡಿದ ಬೆಂಬಲವನ್ನು ಶ್ಲಾಘಿಸಿದರು. “ಹೋಸ್ಟನ್ಗೆ ಬಂದಿದ್ದಕ್ಕೆ ಟ್ರಂಪ್ಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಸ್ನೇಹಿತ. ಅಲ್ಲದೇ, ಅವರು ಭಾರತದ ಉತ್ತಮ ಸ್ನೇಹಿತರೂ ಆಗಿದ್ದಾರೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.