ಇಟನಗರ್: ಸೇನಾಧಿಕಾರಿ ಪೊನುಂಗ್ ಡೋಮಿಂಗ್ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಹುದ್ದೆಗೇರಿದ ಅರುಣಾಚಲಪ್ರದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಅವರು ಟ್ವಿಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ” ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಮೇಜರ್ ಪೊನುಂಗ್ ಡೋಮಿಂಗ್ ಇತಿಹಾಸ ಬರೆದಿದ್ದಾರೆ. ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಅಲಂಕರಿಸಿದ ಅರುಣಾಚಲಪ್ರದೇಶದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಆಕೆಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಟ್ವಿಟ್ ಮಾಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಡೋಮಿಂಗ್ ಅವರಿಗೆ ಶ್ಲಾಘನೆಗಳನ್ನು ವ್ಯಕ್ತಪಡಿಸಿದ್ದು, “ಸಬಲ ಮತ್ತು ಧೈರ್ಯಶಾಲಿ ಮಹಿಳೆ” ಎಂದು ಬಣ್ಣಿಸಿದ್ದಾರೆ.
ನಾರ್ತ್ ಈಸ್ಟ್ ನೌ ವೆಬ್ಸೈಟ್ ಪ್ರಕಾರ, ಡೋಮಿಂಗ್ ಅವರು ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ನಿವಾಸಿಯಾಗಿದ್ದಾರೆ. ಅವರು 2005 ರಲ್ಲಿ ಮಹಾರಾಷ್ಟ್ರದ ವಾಲ್ಚಂದ್ ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ ಮತ್ತು ಕೋಲ್ಕತ್ತಾದ ಎಲ್ ಆ್ಯಂಡ್ ಟಿಗೆ ಸೇರ್ಪಡೆಗೊಂಡು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಈ ಸಮಯದಲ್ಲಿ ಅವರು ಅಲಹಾಬಾದಿನ ಸರ್ವಿಸ್ ಸೆಲೆಕ್ಷನ್ ಬೋರ್ಡ್ಗಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು, 2008 ರಲ್ಲಿ ಅವರು ಸೈನ್ಯಕ್ಕೆ ಸೇರ್ಪಡೆಗೊಳ್ಳುವಲ್ಲಿ ಯಶಸ್ವಿಯಾದರು. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದು ಬಳಿಕ ಲೆಫ್ಟಿನೆಂಟ್ ಆದರು. ನಂತರ ಡೊಮಿಂಗ್ ಅವರು ನಾಲ್ಕುವರೆ ವರ್ಷಗಳಲ್ಲಿ ಮೇಜರ್ ಸ್ಥಾನಕ್ಕೆ ಏರಿದರು. ಇದೀಗ ಲೆಫ್ಟಿನೆಂಟ್ ಕರ್ನಲ್ ಆಗಿ ಹುದ್ದೆಯನ್ನು ಅಲಂಕರಿಸಿದ್ದಾರೆ.
2014ರಲ್ಲಿ ಅವರು ಕಾಂಗೋ ಗಣರಾಜ್ಯದಲ್ಲಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಾಗಿ ಸೇವೆ ಸಲ್ಲಿಸಿದ್ದರು.
A proud moment for all of us…
Major #PonungDoming creates history. She is first woman Army officer from #Arunachal to be elevated to the rank of Lieutenant Colonel in the #IndianArmy.
Hearty congratulations and best wishes! @adgpi pic.twitter.com/O33LbNWTsL
— Pema Khandu (@PemaKhanduBJP) September 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.