ಚಂಡೀಗಢ: ಸಾಧಿಸಲು ದೃಢ ಮನಸ್ಸಿದ್ದರೆ, ವಯಸ್ಸು ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಸಾಬೀತುಪಡಿಸಿ ತೋರಿಸಿದ್ದಾರೆ ಪಂಜಾಬ್ ಹೋಶಿಯಾರ್ಪುರ ಜಿಲ್ಲೆಯ ದತ್ತಾ ಗ್ರಾಮದ ನಿವಾಸಿ ಸೋಹನ್ ಸಿಂಗ್ ಗಿಲ್. 83ನೇ ವಯಸ್ಸಿನಲ್ಲಿ ಇವರು ಇಂಗ್ಲೀಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ತನ್ನ ಶಿಕ್ಷಣ ಅಪೂರ್ಣವಾಗಿದೆ ಎಂಬ ಕೊರಗು ಗಿಲ್ ಅವರನ್ನು ಕಳೆದ 61 ವರ್ಷಗಳಿಂದಲೂ ಕಾಡುತ್ತಿತ್ತು. ಈ ಕೊರಗನ್ನು ನಿವಾರಿಸಿಕೊಳ್ಳುವ ಸಲುವಾಗಿಯೇ ಅವರು ಇಂಗ್ಲೀಷ ಎಂಎ ಅನ್ನು ಪೂರ್ಣಗೊಳಿಸಿದ್ದಾರೆ.
1936ರ ಆಗಸ್ಟ್ 15 ರಂದು ದತ್ತಾದಲ್ಲಿ ಜನಿಸಿದ ಗಿಲ್, ಪಾಂಡೊರಿ ಗಂಗಾ ಸಿಂಗ್ನಲ್ಲಿ ಶಿಕ್ಷಣವನ್ನು ಪ್ರಾರಂಭಿಸಿದರು, ಮಹಿಲ್ಪುರದಲ್ಲಿ 10ನೇ ತರಗತಿ ಪಾಸ್ಸಾದವರು ಮತ್ತು ನಂತರ b ಮಹಿಲ್ಪುರದ ಖಲ್ಸಾ ಕಾಲೇಜಿನಿಂದ ಬ್ಯಾಚುಲರ್ ಇನ್ ಆರ್ಟ್ಸ್ (ಬಿಎ) ಪದವಿ ಪಡೆದರು. 1958 ರಲ್ಲಿ, ಅವರ ಕಾಲೇಜಿನ ಉಪ-ಪ್ರಾಂಶುಪಾಲರ ಒತ್ತಾಯದ ಮೇರೆಗೆ ಅವರು ಎಂ.ಎ ಮಾಡಲು ನಿರ್ಧರಿಸಿದರೂ ಅದು ಸಾಧ್ಯವಾಗಲಿಲ್ಲ. ನಂತರ ಮದುವೆಯಾಗಿ ಕೀನ್ಯಾಕ್ಕೆ ಹೋಗಿ 33 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. 1991 ರಲ್ಲಿ ಸುಮಾರು 60 ವರ್ಷಗಳ ನಂತರ ಅವರು ಭಾರತಕ್ಕೆ ಮರಳಿದರು, ಆದರೆ ಅವರ ಉಪ-ಪ್ರಾಂಶುಪಾಲರ ಸಲಹೆ ಅವರ ಮನಸ್ಸಿನಲ್ಲಿ ಸದಾ ಕಾಡುತ್ತಿತ್ತು.
ಹೀಗಾಗಿ ಅವರು 2018 ರಲ್ಲಿ ಎಂಎಗೆ ತಯಾರಿ ಆರಂಭಿಸಿದರು. ಫಾಗ್ವಾರಾದ ಲವ್ಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಗಿಲ್ ಒರ್ವ ಮಗನನ್ನು ಹೊಂದಿದ್ದು, ಆತ ವಿದೇಶದಲ್ಲಿದ್ದಾನೆ. ಹೀಗಾಗಿ ಇವರು ತಮ್ಮ ಪತ್ನಿಯೊಂದಿಗೆ ದತ್ತಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
“ಶಿಕ್ಷಣವನ್ನು ಪಡೆಯಲು ಯಾವುದೇ ವಯಸ್ಸಿಲ್ಲ. ಎಂಎ ಮಾಡಲು ನಾನು ದೃಢ ನಿಶ್ಚಯವನ್ನು ಮಾಡಿಕೊಂಡಿದ್ದೆ. ಅದರಂತೆ 67% ಅಂಕಗಳನ್ನು ಗಳಿಸಿ ಎಂಎ ಪೂರೈಸಿದ್ದೇನೆ” ಎಂದು ಗಿಲ್ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹೊಸ ತಲೆಮಾರಿನವರು ದೇಶದಲ್ಲಿ ಉನ್ನತ ಶಿಕ್ಷಣವನ್ನು ಮಾಡಲು ಇಷ್ಟಪಡದೆ, ವಿದೇಶಕ್ಕೆ ಹಾರುತ್ತಿರವುದಕ್ಕೆ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ಗಿಲ್ ಬೇಸರ ವ್ಯಕ್ತಪಡಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.