ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಿ, ಹವಮಾನ ವೈಪರೀತ್ಯವನ್ನು ತಡೆಯಲು ಜಗತ್ತು ಒಂದಾಗಿ ಕಾರ್ಯಪ್ರವೃತ್ತವಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ” ಸಮಯ ಈಗಾಗಲೇ ಮುಗಿದಿದೆ, ಇನ್ನೇನಿದ್ದರೂ ಕಾರ್ಯ ಮಾಡಬೇಕಾದ ಸಮಯ” ಎನ್ನುವ ಮೂಲಕ ಬದಲಾವಣೆ ತರಲು ಜಾಗತಿಕ ಆಂದೋಲನದ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ.
“ಶಿಕ್ಷಣ, ಜೀವನಶೈಲಿ, ಅಭಿವೃದ್ಧಿ ಕಾರ್ಯತಂತ್ರವನ್ನು ಒಳಗೊಳ್ಳುವ ಸಮಗ್ರ ವಿಧಾನದ ಅಗತ್ಯವಿದೆ, ಬದಲಾವಣೆಯನ್ನು ತರಲು ನಮಗೆ ಜಾಗತಿಕವಾಗಿ ಜನರ ಆಂದೋಲನ ಬೇಕು. ಒಂದು ಸಣ್ಣ ಅಭ್ಯಾಸವು ಒಂದು ಟನ್ ಉಪದೇಶಕ್ಕಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ನಾವು ನಂಬುತ್ತೇವೆ” ಎಂದು ಪ್ರಧಾನಿ ಹೇಳಿದ್ದಾರೆ.
ಭಾರತದ ಹವಾಮಾನ ಬದಲಾವಣೆ ನೀತಿಗಳ ಬಗ್ಗೆ ಮಾತನಾಡಿದ ಮೋದಿ, “ಪ್ರಕೃತಿಯನ್ನು ಗೌರವಿಸುವುದು ನಮ್ಮ ಸಂಪ್ರದಾಯ ಮತ್ತು ಅವಶ್ಯಕತೆಯ ಭಾಗವಾಗಿದೆ ಮತ್ತು ಇದರಲ್ಲಿ ಯಾವುದೇ ದುರಾಸೆ ಇಲ್ಲ. ನವದೆಹಲಿಯು ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಟ್ಟು ಇಂಧನ ಬಳಕೆಯಲ್ಲಿ ಭಾರತ ತನ್ನ ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚಿಸುತ್ತಿದೆ ಮತ್ತು 2022 ರ ವೇಳೆಗೆ ನಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 175 GW ಗೆ ಹೆಚ್ಚಿಸಲಾಗುತ್ತಿದೆ” ಎಂದಿದ್ದಾರೆ.
ಭಾರತದಲ್ಲಿ “ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕೊನೆಗೊಳಿಸುವ ಜನ ಆಂದೋಲನಕ್ಕೆ ಕರೆ ನೀಡಿದ ಕುರಿತು ಮಾತನಾಡಿದ ಮೋದಿ, “ಇದು ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತದೆ” ಎಂದು ಹೇಳಿದ್ದಾರೆ.
ನೀರಿನ ಸಂರಕ್ಷಣೆಗಾಗಿ ಭಾರತ ಸರ್ಕಾರ ಈಗಾಗಲೇ ಜಲ ಸಂರಕ್ಷಣೆಯನ್ನು ನಡೆಸುತ್ತಿದೆ ಎಂದ ಮೋದಿ, ಮಳೆ ನೀರು ಕೊಯ್ಲು ಮತ್ತು ನೀರಿನ ಸಂಪನ್ಮೂಲಗಳ ಅಭಿವೃದ್ಧಿಗೆ ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಭಾರತದ 50 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ವಿನಿಯೋಗಿಸುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.