ನವದೆಹಲಿ: ಭಾರತದ ರಸ್ಲಿಂಗ್ ತಾರೆ ವಿನೇಶ್ ಫೋಗಟ್ ಅವರು ಬುಧವಾರ 53 ಕೆಜಿ ರಿಪೆಚಗ್ ವಿಭಾಗದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಎರಡನೇ ರಿಪೆಚಗ್ ಸುತ್ತಿನಲ್ಲಿ ಸಾರಾ ಆನ್ ಹಿಲ್ಡರ್ಬ್ರಾಂಡ್ ಅವರನ್ನು ಸೋಲಿಸಿದ ಅವರು ಅರ್ಹತೆ ಪಡೆದುಕೊಂಡಿದ್ದಾರೆ.
ಮುಂದಿನ ವರ್ಷ ಜಪಾನ್ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಕುಸ್ತಿಪಟು ಎಂಬ ಹಿರಿಮೆಗೆ ವಿನೇಶ್ ಫೋಗಟ್ ಪಾತ್ರವಾಗಿದ್ದಾರೆ.
ಕಜಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ 53 ಕೆ.ಜಿ ವಿಭಾಗದ ರಿಪೆಚಗ್ ಸುತ್ತಿನಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ 25ರ ಹರೆಯದ ಯುವ ಭರವಸೆಯ ಕುಸ್ತಿಪಟು ವಿನೇಶ್ ಫೋಗಟ್ ಟೋಕಿಯೋ ಒಲಿಂಪಿಕ್ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.
ಕ್ವಾಡ್ರೇನಿಯಲ್ ಈವೆಂಟಿನಲ್ಲಿ ಫೋಗಟ್ ಅವರು ಸಾರಾ ಅವರನ್ನು 8-2 ರಿಂದ ಸೋಲಿಸಿದರು. ಸಾರಾ ವಿರುದ್ಧದ ಗೆಲುವು ಅವರಿಗೆ ಗ್ರೀಸ್ನ ಅಗ್ರ ಕುಸ್ತಿಪಟುಗಳಲ್ಲಿ ಒಬ್ಬರಾದ ಮಾರಿಯಾ ಪ್ರೆವೊಲಾರಕಿ ವಿರುದ್ಧ ಕಂಚಿನ ಪದಕ್ಕಾಗಿ ಸೆಣಸಾಡುವ ಅವಕಾಶವನ್ನು ನೀಡಿತು.
ಇದಕ್ಕೂ ಮುನ್ನ ಬುಧವಾರ ವಿನೇಶ್ ಮೊದಲ ರಿಪೆಚಗ್ ಸುತ್ತಿನಲ್ಲಿ ಬ್ಲಾಹಿನ್ಯಾ ವಿರುದ್ಧ 5-0 ಅಂತರದ ಜಯ ದಾಖಲಿಸಿದರು. ಜಪಾನ್ನ ಚಾಂಪಿಯನ್ ಮಯು ಮುಕೈದಾ ಅವರ ವಿರುದ್ಧ ಪರಾಭವಗೊಂಡ ಕಾರಣದಿಂದಾಗಿ ಚಿನ್ನದ ಪದಕಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೂ ಒಲಿಂಪಿಕ್ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.