ನವದೆಹೆಲಿ: ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಇ-ಹರಾಜಿನಲ್ಲಿ ಬೆಳ್ಳಿ ‘ಕಲಶ’ ಮತ್ತು ನರೇಂದ್ರ ಮೋದಿಯವರ ಚಿತ್ರವಿರುವ ಫೋಟೋ ಸ್ಟ್ಯಾಂಡ್ ಎರಡೂ ತಲಾ 1 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂದು ಪಿಎಂ ಮೆಮೆಂಟೋಸ್ ವೆಬ್ಸೈಟ್ ತಿಳಿಸಿದೆ.
ಫೋಟೋ ಸ್ಟ್ಯಾಂಡ್, ಗುಜರಾತಿ ಭಾಷೆಯಲ್ಲಿ ಸಂದೇಶವನ್ನು ಕೂಡ ಹೊಂದಿತ್ತು, ಇದರ ಮೂಲ ಬೆಲೆ 500 ರೂಪಾಯಿ. ಆದರೆ ಇದು ಸಚಿವಾಲಯದ ಅಧೀನದಲ್ಲಿರುವ www.pmmementos.gov.in ನಲ್ಲಿ 1,00,00,100 ರೂಗಳಿಗೆ ಮಾರಾಟವಾಗಿದೆ.
‘ಕಲಶ’ದ ಮೂಲ ಬೆಲೆ 18,000 ರೂಪಾಯಿ ಮತ್ತು ಇದು 1,00,00,300 ರೂಗಳಿಗೆ ಮಾರಾಟವಾಗಿದೆ ಎಂದು ಸೈಟ್ ತಿಳಿಸಿದೆ. ಎರಡೂ ವಸ್ತುಗಳನ್ನು ಸೋಮವಾರ ಹರಾಜು ಮಾಡಲಾಗಿದೆ.
ಅಧಿಕ ಬೆಲೆಗೆ ಮಾರಾಟವಾದ ಇತರ ಸ್ಮರಣಿಕೆಯೆಂದರೆ ಕರುವನ್ನು ಪೋಷಿಸುವ ಹಸುವಿರುವ ಲೋಹದ ಶಿಲ್ಪ. ಇದು 1,500 ರೂ.ಗಳ ಮೂಲ ಬೆಲೆಯನ್ನು ಹೊಂದಿತ್ತು, ಆದರೆ ಮಾರಾಟವಾಗಿದ್ದು 51 ಲಕ್ಷ ರೂಪಾಯಿಗಳಿಗೆ.
ಶಾಲುಗಳು, ಪೇಟಗಳು ಮತ್ತು ಜಾಕೆಟ್ಗಳು ಸೇರಿದಂತೆ 2,700 ಕ್ಕೂ ಹೆಚ್ಚು ಸ್ಮರಣಿಕೆ, ಉಡುಗೊರೆಗಳನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 3 ರವರೆಗೆ ವೆಬ್ಸೈಟ್ನಲ್ಲಿ ಹರಾಜು ಮಾಡಲಾಗುತ್ತಿದೆ. ಇವುಗಳು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿವೆ. ಉಡುಗೊರೆಗಳ ಬೆಲೆ 200 ರೂ.ನಿಂದ 2.5 ಲಕ್ಷ ರೂವರೆಗೆ ನಿಗದಿಪಡಿಸಲಾಗಿದೆ.
ಸೀಮಟ್ಟಿ ಜವಳಿ ಮಾಲೀಕ ಬೀನಾ ಕಣ್ಣನ್ ಅವರು ಉಡುಗೊರೆಯಾಗಿ ನೀಡಿದ್ದ ರೇಷ್ಮೆಯಲ್ಲಿ ರಚಿಸಿದ ಮೋದಿ ಭಾವಚಿತ್ರವೂ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ವಿನ್ಯಾಸಗೊಳಿಸಿದ ಆನ್ಲೈನ್ ಪೋರ್ಟಲ್ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ ಮತ್ತು ಇದು ಎಲ್ಲರಿಗೂ ಮುಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.