ಮುಂಬಯಿ: 2006, ಜುಲೈ 11ರ ಮುಂಬಯಿ ರೈಲು ಬಾಂಬ್ ಸ್ಫೋಟದಲ್ಲಿ ಗಾಯಗೊಂಡು 9 ವರ್ಷಗಳ ಕಾಲ ಕೋಮಾವಸ್ಥೆಯಲ್ಲಿ ಜೀವನ ಕಳೆದಿದ್ದ ಪರಾಗ್ ಸಾವಂತ್ ಮಂಗಳವಾರ ನಿಧನರಾಗಿದ್ದಾರೆ.
ಕಳೆದ 9 ವರ್ಷದಿಂದಲೂ ಅವರು ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಮಿದುಳಿಗೆ ತೀವ್ರವಾದ ಹೊಡೆತ ಬಿದ್ದ ಪರಿಣಾಮವಾಗಿ ಅವರಿಗೆ ಕೋಮಾದಿಂದ ಹೊರಬರಲು ಸಾಧ್ಯವಾಗಿರಲಿಲ್ಲ. 2011ರಲ್ಲಿ ಒಮ್ಮೆ ಇವರು ಎಚ್ಚರಗೊಂಡು ತುಸು ಸಂಭಾಷಣೆ ನಡೆಸಿದ್ದರು. ಆದರೆ ಬಳಿಕ ಮತ್ತೆ ಕೋಮಾಗೆ ತೆರಳಿದ್ದರು.
ಚರ್ಚ್ಗೇಟ್-ವಿರರ್ ರೈಲು ಮೀರಾರೋಡ್ ತಲುಪುತ್ತಿದ್ದಂತೆ ಬಾಂಬ್ ಸ್ಫೋಟಕ್ಕೊಳಗಾಗಿತ್ತು, ಆ ವೇಳೆ ಇದರಲ್ಲಿ ಸಾವಂತ್ ಮತ್ತು ಅವರ ಗರ್ಭಿಣಿ ಪತ್ನಿ ಪ್ರೀತಿ ಸಾವಂತ್ ಇದ್ದರು. ಈ ಸ್ಫೋಟದಲ್ಲಿ ಒಟ್ಟು 118 ಮಂದಿ ಸಾವನ್ನಪ್ಪಿ 817 ಮಂದಿ ಗಾಯಗೊಂಡಿದ್ದರು.
ಈ ಸ್ಫೋಟದಲ್ಲಿ ಗಾಯಗೊಂಡು 9ವರ್ಷದಿಂದ ಕೋಮಾದಲ್ಲಿದ್ದ ಸಾವಂತ್ ಇಂದು ಆಸ್ಪತ್ರೆಯಲ್ಲೇ ಮೃತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.