ನವದೆಹಲಿ: ಹಿಂದಿ, ಇಂಗ್ಲೀಷ್ ಮತ್ತು ಗುಜರಾತಿ ಭಾಷೆಯನ್ನು ಬ್ರೈಲ್ ಭಾಷೆಗೆ ಭಾಷಾಂತರಗೊಳಿಸುವ ಮಾಡೆಲ್ವೊಂದನ್ನು ಗುಜರಾತಿನ ಪ್ರೊಫೆಸರ್ ಡಾ.ನಿಕಿಶಾ ಜರಿವಾಲಾ ಅವರು ಕಂಡು ಹಿಡಿದಿದ್ದಾರೆ. ಈ ಮಾಡೆಲ್ನಿಂದ ದೃಷ್ಟಿ ಹೀನ ಜನರಿಗೆ ಸಾಕಷ್ಟು ಸಹಾಯಕವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಕಿಶಾ ಅವರು, “ಈ ಮಾಡೆಲ್ ಸಹಾಯದೊಂದಿಗೆ ದೃಷ್ಟಿಹೀನರು ಎಲ್ಲರೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದು ಮತ್ತು ಎಲ್ಲರಂತೆ ಸಾಮಾನ್ಯ ಶಿಕ್ಷಣವನ್ನು ಪಡೆದುಕೊಳ್ಳಬಹುದು. ಯಾಕೆಂದರೆ ಈ ಮಾಡೆಲ್ ಹಿಂದಿ, ಇಂಗ್ಲೀಷ್ ಮತ್ತು ಗುಜರಾತಿ ಭಾಷೆಗಳನ್ನು ಬ್ರೈಲ್ ಲಿಪಿಗೆ ಭಾಷಾಂತರಗೊಳಿಸುತ್ತದೆ. ಕೇವಲ ಅಕ್ಷರಗಳನ್ನು ಮಾತ್ರವಲ್ಲ, ಡ್ರಾಯಿಂಗ್ ಮತ್ತು ಗಣಿತ ಸಮೀಕರಣಗಳನ್ನೂ ಇದು ಭಾಷಾಂತರ ಮಾಡುತ್ತದೆ” ಎಂದಿದ್ದಾರೆ.
ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಆಗಿರುವ ಎಂ.ಎಸ್.ನಿಕಿಶಾ ಅವರು ಈ ಮಾಡೆಲ್ ಅನ್ನು ಅಭಿವೃದ್ಧಿಪಡಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಅವರ ಈ ಮಾಡೆಲ್ ದೃಷ್ಟಿಹೀನರಿಗೆ ವರದಾನವಾಗಲಿದೆ.
“Design and Development of the model to transliterate digitalised multilingual text into braille and speech – an aid for visually impaired people” ಎಂಬ ವಿಷಯದ ಮೇಲೆ ನಿಕಿಶಾ ಅವರು ಪಿಎಚ್ಡಿ ಮಾಡುತ್ತಿದ್ದಾರೆ. ಅದರ ಭಾಗವಾಗಿ ಅವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.
“ಪಿಎಚ್ಡಿ ಪೂರ್ಣಗೊಳಿಸಲು ನನಗೆ ನಾಲ್ಕೂವರೆ ವರ್ಷ ಬೇಕಾಯಿತು. ನಾನು ಬ್ರೈಲ್ ಲಿಪಿ ಕೂಡ ಕಲಿತಿದ್ದೇನೆ. ಇಂಟರ್ನೆಟ್ನಲ್ಲಿ ಹಲವಾರು ಡಿಜಿಟಲ್ ದಾಖಲೆಗಳಿವೆ, ಅದನ್ನು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಓದಲಾಗುವುದಿಲ್ಲ ಆದರೆ ಈಗ ಅವರು ಈ ಮಾಡೆಲ್ ಮೂಲಕವೂ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.