ನವದೆಹಲಿ: ಕಜಕೀಸ್ಥಾನದ ನೂರ್-ಸುಲ್ತಾನ್ನಲ್ಲಿ ‘ವಿಶ್ವ ಕುಸ್ತಿ ಚಾಂಪಿಯನ್ಶಿಪ್ 2019’ ಸೆಪ್ಟೆಂಬರ್ 14 ರಿಂದ 22 ರವರೆಗೆ ನಡೆಯಲಿದೆ. ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಇದು ನೇರ ಪ್ರಸಾರಗೊಳ್ಳಲಿದೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್ 2019 ರ ಅರ್ಹತಾ ಪಂದ್ಯಗಳು ಇಂದು ಬೆಳಿಗ್ಗೆ 10: 30 ಕ್ಕೆ ಪ್ರಾರಂಭವಾಗಿದ್ದು, ನಂತರ ಇತರ ಸುತ್ತುಗಳು ನಡೆಯಲಿವೆ. ಪಂದ್ಯಗಳ ಲೈವ್ ಸ್ಟ್ರೀಮಿಂಗ್ wrestlingtv.in.ನಲ್ಲಿ ಕೂಡ ಇರಲಿದೆ.
ಈ ವಿಶ್ವ ಚಾಂಪಿಯನ್ಶಿಪ್ ಭಾರತೀಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಅವರಿಗೆ ಅತ್ಯಂತ ಮಹತ್ವದ್ದಾಗಿದೆ. ದಿವ್ಯಾ ಕಕ್ರಾನ್ ಸೇರಿದಂತೆ ಹಲವಾರು ಉದಯೋನ್ಮುಖ ಕುಸ್ತಿಪಟುಗಳೂ ಇಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
2019 ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಗ್ರ ಶ್ರೇಯಾಂಕ ಪಡೆದ ಏಕೈಕ ಭಾರತೀಯ ಕುಸ್ತಿಪಟು ಬಜರಂಗ್ ಪುನಿಯಾ ಆಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.