ಪಣಜಿ: ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಗೌರವಾರ್ಥ ಸ್ಮಾರಕವನ್ನು ನಿರ್ಮಾಣ ಮಾಡಲು ಗೋವಾ ಸರ್ಕಾರ ನಿರ್ಧರಿಸಿದೆ. ಸ್ಮಾರಕಕ್ಕೆ ಡಿಸೆಂಬರ್ 13 ರಂದು ಅಡಿಪಾಯ ಹಾಕಲಾಗುತ್ತದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಬುಧವಾರ ಘೋಷಣೆ ಮಾಡಿದ್ದಾರೆ.
‘ಮನೋಹರ್ ಪರಿಕ್ಕರ್ ವಿಜ್ಞಾನ ಮಹೋತ್ಸವ್ 2019’ ಬಗ್ಗೆ ಮಾಹಿತಿ ನೀಡಿದ ವೇಳೆ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
ಗೋವಾ ಸಿಎಂ ಆಗಿ, ದೇಶದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದ ಪರಿಕ್ಕರ್ ಈ ವರ್ಷದ ಮಾರ್ಚ್ 17 ರಂದು ತಮ್ಮ 63 ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದರು. ಪರಿಕ್ಕರ್ ಅವರ ಸ್ಮರಣಾರ್ಥ ಮಿರಾಮರ್ ಬೀಚ್ನಲ್ಲಿ ‘ಸ್ಮೃತಿ ಸ್ಥಳ್’ ಎಂಬ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲು ಗೋವಾ ಸರ್ಕಾರ ಮುಂದಾಗಿದೆ. ಡಿಸೆಂಬರ್ 13ರಂದು ಅಡಿಪಾಯವನ್ನು ಹಾಕಲಾಗುತ್ತಿದೆ. ಡಿ.13 ಪರಿಕ್ಕರ್ ಅವರ ಜನ್ಮ ದಿನಾಚರಣೆಯೂ ಹೌದು.
ಪರಿಕ್ಕರ್ ಅವರ ಅಂತ್ಯಸಂಸ್ಕಾರವನ್ನು ಕೂಡ ಪಣಜಿಯಲ್ಲಿನ ಮಿರಾಮರ್ ಬೀಚ್ನಲ್ಲಿ ನಡೆಸಲಾಗಿತ್ತು.
ಸಾವಂತ್ ಮಂಗಳವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿ ಸ್ಮಾರಕದ ವಾಸ್ತುಶಿಲ್ಪ ಮತ್ತು ವಿನ್ಯಾಸವನ್ನು ಅಂತಿಮಗೊಳಿಸಿದ್ದಾರೆ. ಮುಂಬಯಿ ಮೂಲದ ಯುಸಿಜೆ ಆರ್ಕಿಟೆಕ್ಚರ್ ಆ್ಯಂಡ್ ಎನ್ವಿರಾನ್ಮೆಂಟ್ ಅನ್ನು ಸ್ಮಾರಕ ವಿನ್ಯಾಸಕ್ಕಾಗಿ ಆಯ್ಕೆ ಮಾಡಲಾಗಿದೆ.
“ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಜಿಎಸ್ಐಡಿಸಿ) ಸ್ಮಾರಕದ ಕಾರ್ಯವನ್ನು ನಿರ್ವಹಿಸಲಿದೆ. ಪ್ರಸ್ತಾವಿತ ಸ್ಮಾರಕ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಸಾರ್ವಜನಿಕ ವಿವರಗಳನ್ನು ನೀಡಬೇಕಾಗಿದೆ, ಅದು ಪರಿಕ್ಕರ್ ಅವರ ಜೀವನವನ್ನು ಪ್ರತಿಬಿಂಬಿಸಲಿದೆ” ಎಂದು ಸಾವಂತ್ ಹೇಳಿದ್ದಾರೆ.
ಪರಿಕ್ಕರ್ ಅವರು ಕರಾವಳಿ ರಾಜ್ಯವಾದ ಗೋವಾದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಸೇವೆ ಸಲ್ಲಿಸಿದ್ದರು ಮತ್ತು ಹಿಂದಿನ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಅವರು ರಕ್ಷಣಾ ಸಚಿವರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
Chief Minister @DrPramodPSawant today chaired the meeting held to select architectural firm for design of late Shri Manohar Parrikar Smriti Sthal at Miramar. The meeting was also attended by the members of jury committee. pic.twitter.com/GmyDaPMWaw
— CMO Goa (@goacm) September 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.