ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಸೂಚನೆಯ ಮೇರೆಗೆ ಲಕ್ನೋ ಮಹಾನಗರ ಪಾಲಿಕೆಯು ಗೋವುಗಳನ್ನು ಸಾಕುವವರಿಗೆ ದಾನ ನೀಡಲು ಮುಂದಾಗಿದೆ.
”ಸುಮಾರು 4,500 ಹಸುಗಳನ್ನು ದಾನ ಮಾಡುವ ಗುರಿಯನ್ನು ಸರ್ಕಾರ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ನಾಲ್ಕು ಹಸುಗಳನ್ನು ನೀಡಲಾಗುವುದು” ಎಂದು ಲಕ್ನೋ ಮುನ್ಸಿಪಲ್ ಕಮಿಷನರ್ ಇಂದ್ರಮಣಿ ತ್ರಿಪಾಠಿ ಮಾಧ್ಯಮಗಳಿಗೆ ತಿಳಿಸಿದ್ದದಾರೆ.
ಹಸು ಸಾಕಾಣಿಕೆದಾರರು ಅಫಿಡವಿಟ್ ನೀಡಬೇಕಾಗಿದೆ. ಬಳಿಕ ಹಸುಗಳಿಗೆ ಎಲ್ಲಿ ಆಶ್ರಯ ನೀಡಲಾಗುತ್ತದೆ ಎಂಬ ಬಗ್ಗೆ ವಿವರಗಳನ್ನು ಅವರು ನಮಗೆ ನೀಡಬೇಕಾಗುತ್ತದೆ. ಬಳಿಕ ಅವರು ಹಸುಗಳನ್ನು ನಮ್ಮ ಗೋಶಾಲೆಗಳಿಂದ ದತ್ತು ಪಡೆದುಕೊಳ್ಳಬಹುದಾಗಿದೆ, ಅದಕ್ಕೆ ಮೇವನ್ನು ಕೊಡಲು ಅವರಿಗೆ ನಾವು ತಿಂಗಳಿಗೆ ರೂ.900 ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತು ಅನಾಥ ಗೋವುಗಳಿಗೆ ರಕ್ಷಣೆಯನ್ನು ನೀಡುವ ನಿಟ್ಟಿನಲ್ಲಿ ಕೈಗೊಳ್ಳಲಾದ ಮಹತ್ವದ ನಿರ್ಧಾರ ಇದಾಗಿದೆ. ಸುಮಾರು 4,500 ದನಗಳನ್ನು ನೀಡುವ ಉದ್ದೇಶವನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.