ನವದೆಹಲಿ: ನವದೆಹಲಿಯಲ್ಲಿ ನಡೆದ ಟ್ರ್ಯಾಕ್ ಏಷ್ಯಾ ಕಪ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಂಗಳವಾರ ಪುರುಷರ ಜೂನಿಯರ್ 200 ಮೀ ಟೈಮ್ ಟ್ರಯಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ರೊನಾಲ್ಡೊ ಲೈತೋನ್ಜಮ್ 10.065 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಹೊಸ ಏಷ್ಯಾ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಸ್ಪರ್ಧೆಯ ಮೊದಲನೆಯ ದಿನದಂದು ಎರಡು ಚಿನ್ನದ ಪದಕಗಳನ್ನು ಗೆದ್ದ ರೊನಾಲ್ಡೊ, 2018 ರಲ್ಲಿ 10,149 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದ ಚೀನಾದ ಲಿಯು ಕಿ ಅವರ ದಾಖಲೆಯನ್ನು ಮುರಿದರು.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲನೆಯ ದಿನದ ಸ್ಪರ್ಧೆಯಲ್ಲಿ 12 ಪದಕಗಳನ್ನು ಗೆದ್ದ ಭಾರತ ಎರಡನೇ ದಿನ ಮೂರು ಪದಕಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಿತು.
ಪುರುಷರ ಜೂನಿಯರ್ ವಿಭಾಗದಲ್ಲಿ ವೈಯಕ್ತಿಕ ಪರ್ಸ್ಯೂಟ್ (3 ಕಿ.ಮೀ) ಗೆಲ್ಲುವ ಮೂಲಕ ವೆಂಕಪ್ಪ ಶಿವ ಕೆ. ಭಾರತದ ಪಟ್ಟಿಗೆ ಇನ್ನೂ ಒಂದು ಚಿನ್ನವನ್ನು ಸೇರಿಸಿದರೆ, ಎಸ್ಎಐ ಎನ್ಸಿಎಯ ಮುಲಾ ರಾಮ್ ಮತ್ತು ಇರಾನ್ನ ಲ್ಯಾಬಿಬ್ ಅಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಎಲೀಟ್ ಪುರುಷರ 4 ಕಿ.ಮೀ ವೈಯಕ್ತಿಕ ಪರ್ಸ್ಯೂಟ್ ಸ್ಪರ್ಧೆಯಲ್ಲಿ ಮಲೇಷ್ಯಾದ ಎಮಾಮ್ ಫಿರ್ದೌಸ್ ಮೊಹಮ್ಮದ್ ಜಮ್ರಿ ವಿರುದ್ಧ ಪೂನಮ್ ಚಾಂದ್ ಬೆಳ್ಳಿ ಪಡೆದರು. ಕಜಕೀಸ್ಥಾನ ಡಿಮಿಟ್ರಿ ಪೊಟಪೆಂಕೊ ಕಂಚು ಗೆದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.