ರಾಜ್ಕೋಟ್ : ರಸ್ತೆ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ರಾಜ್ಕೋಟ್ ಸಂಚಾರಿ ಪೊಲೀಸರು ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದರು. ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರವಾಹನವನ್ನು ಓಡಿಸುತ್ತಿದ್ದವರಿಗೆ ಗಣೇಶನ ಕೈಯಲ್ಲಿ ಲಡ್ಡು ಅನ್ನು ವಿತರಿಸಿದ್ದಾರೆ.
ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಣೇಶನ ಮಾದರಿಯಲ್ಲಿ ಧಿರಿಸನ್ನು ಧರಿಸಿಕೊಂಡು ಹೆಲ್ಮೆಟ್ ಹಾಕಿದವರಿಗೆ ಲಡ್ಡು ನೀಡಿದ್ದಾರೆ. ಮಾತ್ರವಲ್ಲ ಶ್ಲಾಘನೆಯ ಸರ್ಟಿಫಿಕೇಟ್ ಅನ್ನು ಕೂಡ ನೀಡಿದ್ದಾರೆ.
ಬೋಲ್ಬಲ ಎಂಬ ಸಂಸ್ಥೆಯ ಸಹಕಾರದೊಂದಿಗೆ ಪೊಲೀಸರು ಈ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
“ಕಡ್ಡಾಯವಾಗಿರುವ ಹೆಲ್ಮೆಟ್ ಅನ್ನು ಜನರು ಧರಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಹೆಲ್ಮೆಟ್ ಧರಿಸಿದವರಿಗೆ ಗಣೇಶನಿಂದ ಸಿಹಿಯನ್ನು ನೀಡಿದ್ದೇವೆ. ಇದು ಜನರಲ್ಲಿ ಅರಿವನ್ನು ಮೂಡಿಸಲು ಮತ್ತು ಅವರಿಗೆ ಸಂಚಾರ ನಿಯಮವನ್ನು ಪಾಲಿಸುವಂತೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ” ಎಂದು ರಾಜ್ಕೋಟ್ ಎಸಿಪಿ ಅಜಯ್ ಚೌಧರಿ ಹೇಳಿದ್ದಾರೆ.
“ತಲೆ ಮನುಷ್ಯನ ಬಹು ಮುಖ್ಯವಾದ ಅಂಗ ಮತ್ತು ಅದರ ಸುರಕ್ಷತೆಗೆ ನಾವು ಮಹತ್ವವನ್ನು ನೀಡಬೇಕು. ಅದಕ್ಕಾಗಿ ನಾವು ಗಣೇಶ ವೇಷಧಾರಿಗಳಿಂದ ಹೆಲ್ಮೆಟ್ ಧರಿಸಿದವರಿಗೆ ಲಡ್ಡು ಕೊಡುವ ಮತ್ತು ಶ್ಲಾಘನೆಯ ಸರ್ಟಿಫಿಕೇಟ್ ಅನ್ನು ನೀಡುವ ಕಾರ್ಯವನ್ನು ಆಯೋಜಿಸಿಸಿದ್ದೇವೆ” ಎಂದು ಬೋಲ್ಬಲಾ ಟ್ರಸ್ಟ್ ಮುಖ್ಯಸ್ಥ ಜಯೇಶ್ ಉಪಾಧ್ಯಾಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.