ನವದೆಹಲಿ: ಡೋರಿಯನ್ ಚಂಡಮಾರುತದಿಂದ ತೀವ್ರ ಸ್ವರೂಪದಲ್ಲಿ ನಷ್ಟ ಅನುಭವಿಸುತ್ತಿರುವ ಬಹಮಾಸ್ಗೆ ಭಾರತವು ಒಂದು ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ನೀಡಲು ನಿರ್ಧರಿಸಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿಯನ್ನು ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರವಿಶಂಕರ್ ಅವರು, “ಬಹಮಾಸ್ನಲ್ಲಿ ಡೋರಿಯನ್ ಚಂಡಮಾರುತ ಸೃಷ್ಟಿಸಿರುವ ತೀವ್ರಸ್ವರೂಪದ ಹಾನಿಗಳು ನಮಗೆ ನೋವು ತಂದಿದೆ. ಬಹಮಾಸಿನ ಸ್ನೇಹಪರ ಜನರೊಂದಿಗೆ ಸೌಹಾರ್ದತೆಯನ್ನು ಹಂಚಿಕೊಳ್ಳುವ ಸಂಕೇತವಾಗಿ 1 ಮಿಲಿಯನ್ ಡಾಲರ್ ನೆರವನ್ನು ನೀಡಲು ನಿರ್ಧರಿಸಿದ್ದೇವೆ” ಎಂದಿದ್ದಾರೆ.
ಬಹಮಾಸ್ನಲ್ಲಿ ಡೋರಿಯನ್ ಅನ್ನು ಕೆಟಗರಿ 5ರ ಚಂಡಮಾರುತ ಎಂದು ಪರಿಗಣಿಸಲಾಗಿದ್ದು ಇದು ತೀವ್ರಸ್ವರೂಪದ ಹಾನಿಗಳನ್ನು ಮಾಡಿದೆ. ಇದರ ಪ್ರಭಾವದಿಂದಾಗಿ ದ್ವೀಪರಾಷ್ಟ್ರದಲ್ಲಿ ಅಪಾರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಮರಗಳು ಧರೆಗೆ ಉರುಳಿವೆ, ಅಪಾರ ಪ್ರಮಾಣದ ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಪ್ರಾಣಿ ಪಕ್ಷಿಗಳು ಕೂಡಾ ಪ್ರಾಣ ಕಳೆದುಕೊಂಡಿವೆ.
ಚಂಡಮಾರುತದ ಪ್ರಭಾವದಿಂದಾಗಿ ಅಲ್ಲಿ ಇದುವರೆಗೆ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಬಹಮಾಸ್ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಅವಾಂತರವನ್ನು ಸೃಷ್ಟಿಸಿರುವ ಡೋರಿಯನ್ ಚಂಡಮಾರುತ ಶನಿವಾರದಿಂದ ಕೆನಡಾದ ನೋವ ಸ್ಕಾಟಿಯ ಪ್ರಾಂತ್ಯದಲ್ಲಿ ಹಾನಿಗಳನ್ನು ಸೃಷ್ಟಿಸುತ್ತಿದೆ. ಅಲ್ಲೂ ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.