ಬೆಂಗಳೂರು: ಆರ್ಬಿಟರ್ನಿಂದ ಬೇರ್ಪಟ್ಟ ಚಂದ್ರಯಾನ-2 ಗಗನನೌಕೆ ಚಂದ್ರನ ಮೇಲ್ಮೈಗೆ ಇಳಿಯುವ ವೇಳೆ ತನ್ನ ಸಂಪರ್ಕವನ್ನು ಕಡಿದುಕೊಂಡಿದೆ. ಈ ಹಿನ್ನಲೆಯಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಇಂತಹ ವೇಳೆಯಲ್ಲಿ ಇಡೀ ದೇಶವೇ ನಮ್ಮ ವಿಜ್ಞಾನಿಗಳ ಜೊತೆ ನಿಂತಿತ್ತು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಿತ್ತು. ಆದರೆ ಇಸ್ರೋ ಕೇಂದ್ರದಲ್ಲಿ ಇದ್ದ ಎನ್ಡಿಟಿವಿಯ ಪತ್ರಕರ್ತನೊಬ್ಬ ವಿಜ್ಞಾನಿಗಳ ಜೊತೆ ದುರ್ವತನೆ ತೋರಿಸಿ ಎಲ್ಲರ ಕೆಂಗಣ್ಣಿಗೆ ಪಾತ್ರನಾಗಿದ್ದಾನೆ.
ನಸುಕಿನ ಜಾವ ಸುಮಾರು 2.40ರ ವೇಳೆಗೆ ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರು, “ವಿಕ್ರಮ್ ಲ್ಯಾಂಡರ್ ಇಳಿಯುವಿಕೆ ಯೋಜಿಸಿದಂತೆ ನಡೆಯುತ್ತಿದೆ ಮತ್ತು 2.1 ಕಿ.ಮೀ ಎತ್ತರದಲ್ಲಿ ಸಾಮಾನ್ಯ ಕಾರ್ಯಕ್ಷಮತೆಯನ್ನು ಗಮನಿಸಲಾಗಿದೆ. ಆದರೆ ಬಳಿಕ, ಲ್ಯಾಂಡರ್ನಿಂದ ಗ್ರೌಂಡ್ ಸ್ಟೇಶನಿಗೆ ಸಂಪರ್ಕ ಕಳೆದುಹೋಗಿದೆ. ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ” ಎಂದು ಘೋಷಣೆ ಮಾಡಿದ್ದರು.
ಈ ಘೋಷಣೆ ಮಾಡುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಸಿವನ್ ಅವರ ಬೆನ್ನನ್ನು ತಟ್ಟಿದ್ದರು. ಆ ಕ್ಷಣದಲ್ಲಿ ಪ್ರತಿ ವಿಜ್ಞಾನಿಗಳ ಮುಖದಲ್ಲೂ ಆತಂಕದ ಛಾಯೆ ಇತ್ತು. ಅವರ ಆತ್ಮವಿಶ್ವಾಸ ಕುಂದಿದಂತಿತ್ತು. 45 ದಿನಗಳ ಕಾಯುವಿಕೆಗೆ ಫಲ ಸಿಗುವ ಸಂದರ್ಭದಲ್ಲಿ ಎಡವಟ್ಟಾಗಿದ್ದು ಅವರಲ್ಲಿ ಆತಂಕ ಹೆಚ್ಚಾಗುವುದಕ್ಕೆ ಕಾರಣವಾಗಿತ್ತು.
ಆದರೆ ಇಡೀ ದೇಶ, ಪ್ರಧಾನಿ ಇಸ್ರೋ ವಿಜ್ಞಾನಿಗಳ ಜೊತೆ ನಿಂತಿದ್ದರು. ಆದರೆ ಆಂತಕದ ಸಮಯದಲ್ಲಿ ಎನ್ಡಿಟಿವಿಯ ಪತ್ರಕರ್ತ ಪಲ್ಲವ್ ಬಾಗ್ಲಾ ವಿಜ್ಞಾನಿಗಳ ವಿರುದ್ಧ ಕೂಗಾಡಿದ್ದಾನೆ. ಕೆ.ಸಿವನ್ ಯಾಕೆ ಚಂದ್ರಯಾನ-2 ವಿಫಲವಾಗಿದೆ ಎಂದು ಘೋಷಣೆ ಮಾಡುತ್ತಿಲ್ಲ ಎಂದು ಅರಚಾಡಿದ್ದಾನೆ.
ಆತನ ಅರಚಾಟದ ವೀಡಿಯೋ ಈಗ ವೈರಲ್ ಆಗಿದೆ. ವೀಡಿಯೊದಲ್ಲಿ ಪತ್ರಕರ್ತ ಪತ್ರಿಕಾಗೋಷ್ಠಿಯಲ್ಲಿ ಸಂವಹನ ನಡೆಸುತ್ತಿದ್ದ ವಿಜ್ಞಾನಿಗಳ ಮೇಲೆ ಸೊಕ್ಕಿನಿಂದ ಕಿರುಚುತ್ತಿರುವುದು ಕೇಳುತ್ತದೆ. ಇಸ್ರೊ ಮುಖ್ಯಸ್ಥರು ಪತ್ರಿಕಾಗೋಷ್ಠಿಗೆ ಯಾಕೆ ಹಾಜರಾಗಿಲ್ಲ ಎಂದು ಆತ ವಿಜ್ಞಾನಿಗಳನ್ನು ಕೇಳಿದ್ದಾನೆ. ಏನಾದರೂ ತಪ್ಪು ಸಂಭವಿಸಿದಾಗ, ಇಸ್ರೋ ಮುಖ್ಯಸ್ಥರು ಮಾಧ್ಯಮಗಳೊಂದಿಗೆ ಸಂವಹನ ನಡೆಸುವುದು ಪದ್ಧತಿಯಲ್ಲವೇ ಎಂದು ಪ್ರಶ್ನಿಸಿದ್ದಾನೆ. ತನ್ನ ದುರಹಂಕಾರವನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಆತ, ತಕ್ಷಣವೇ ಇಸ್ರೋ ಮುಖ್ಯಸ್ಥರು ಮಾಧ್ಯಮಗಳೊಂದಿಗೆ ಸಂವಹನ ನಡೆಸಬೇಕೇ ಹೊರತು ಅವರ ಕಿರಿಯರಲ್ಲ ಎಂದಿದ್ದಾನೆ.
ತನ್ನ ವರ್ತನೆಗೆ ಖಂಡನೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪಲ್ಲವ ಬಾಗ್ಲಾ ಟ್ವಿಟರ್ ಮೂಲಕ ಕ್ಷಮೆಯಾಚನೆ ಮಾಡಿದ್ದಾನೆ.
If you want to see the pathetic state of Indian Journalism, watch how the journalist is shouting at an ISRO Scientist during such tension.
The Tone 😡😡😡 pic.twitter.com/zT2IWesU77
— Ankur Singh (@iAnkurSingh) September 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.