ಮುಂಬಯಿ: ಮುಂಬಯಿನ ನೇವಿ ಚಿಲ್ಡ್ರನ್ ಸ್ಕೂಲ್ ವಿದ್ಯಾರ್ಥಿನಿ ಮತ್ತು ನೌಕಾ ಅಧಿಕಾರಿಯ ಮಗಳಾದ ಕಾಮ್ಯಾ ಕಾರ್ತಿಕೇಯನ್ ಅವರು, ಎರಡನೇ ಬಾರಿಗೆ 6,000 ಮೀ. ಗೂ ಅಧಿಕ ಎತ್ತರದ ಶೃಂಗವನ್ನು ಹತ್ತಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಆಗಸ್ಟ್ 24ರಂದು ಅವರು ಲಡಾಖಿನ ತ್ಸೊ ಮೊರಿರಿ ಸರೋವರಕ್ಕೆ ಮುಖ ಮಾಡಿರುವ 6,262 ಮೀಟರ್ (20,544 ಅಡಿ) ಎತ್ತರದ ಮೌಂಟ್ ಮೆಂಟೋಕ್ ಕಾಂಗ್ರಿ ಅನ್ನು ಹತ್ತಿದ್ದಾರೆ.
ಕಾಮ್ಯಾ ಕಾರ್ತಿಕೇಯನ್ ಅವರು ಆಗಸ್ಟ್ 2017 ರಲ್ಲಿ 6,000 ಮೀಟರ್ ಎತ್ತರದ ಮೌಂಟ್ ಸ್ಟೋಕ್ ಕಾಂಗ್ರಿಯನ್ನು ಹತ್ತಿದ್ದರು. ಈ ಸಾಧನೆಯನ್ನು ಮಾಡಿದ ವಿಶ್ವದ ಅತ್ಯಂತ ಕಿರಿಯ ವಯಸ್ಸಿನವಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ರಕ್ಷಣಾ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಪ್ರತಿ ಖಂಡದ ಅತಿ ಎತ್ತರದ ಶಿಖರಗಳನ್ನು ಹತ್ತುವುದು ಮತ್ತು ಎರಡೂ ಧ್ರುವಗಳಿಗೆ ಪ್ರಯಾಣ ಬೆಳೆಸುವ ಗುರಿಯನ್ನು ಆಕೆ ಹೊಂದಿದ್ದಾಳೆ.
ಈಕೆ ಈಗಾಗಲೇ ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದ ಅತ್ಯುನ್ನತ ಶಿಖರಗಳನ್ನು ಹತ್ತಿದ್ದಾರೆ. ಅಲ್ಲದೇ, ದಕ್ಷಿಣ ಅಮೆರಿಕದ ಅತ್ಯುನ್ನತ ಶಿಖರವಾದ 6962 ಮೀ ಎತ್ತರದ ಮೌಂಟ್ ಅಕಾನ್ಕಾಗುವಾ ಅನ್ನು ಏರಲು ಸಿದ್ಧತೆ ನಡೆಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.