ನವದೆಹಲಿ: ಭಾರತೀಯ ನೌಕಾಪಡೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ, 10 ಬೋಯಿಂಗ್ P8I ಕಡಲ ಗಸ್ತು ಏರ್ಕ್ರಾಫ್ಟ್ಗಳನ್ನು ಖರೀದಿಸಲು ಭಾರತವು ಅಮೆರಿಕಾದೊಂದಿಗೆ 1 3.1 ಬಿಲಿಯನ್ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಮುಂದಿನ ವಾರ ಈ ಕಡಲ ಗಸ್ತು ಏರ್ಕ್ರಾಫ್ಟ್ಗಳ ಖರೀದಿ ನಿರ್ಧಾರ ಅಂತಿಮಗೊಳ್ಳುವ ಸಾಧ್ಯತೆಯಿದೆ. ಒಪ್ಪಂದವನ್ನು ವಿದೇಶಿ ಮಿಲಿಟರಿ ಮಾರಾಟ (ಎಫ್ಎಂಎಸ್) ಹಾದಿಯಲ್ಲಿ ಖರೀದಿ ಮಾಡಲು ನಿರ್ಧರಿಸಲಾಗಿದೆ.
ಈ ಒಪ್ಪಂದವು ದೇಶೀಯ ಕಂಪನಿಗಳಿಗೆ ಕನಿಷ್ಠ ಶೇ.30ರಷ್ಟು ಆಫ್ಸೆಟ್ಗಳಿಗೆ ಕಡ್ಡಾಯ ಷರತ್ತು ಒಳಗೊಂಡಿರುತ್ತದೆ. ಭಾರತವು ಈಗಾಗಲೇ 8 P8I ಏರ್ಕ್ರಾಫ್ಟ್ಗಳನ್ನು ಹೊಂದಿದೆ, ಹೆಚ್ಚುವರಿ 4ಕ್ಕೆ 2016 ರಲ್ಲಿ ಆರ್ಡರ್ ಆಗಿತ್ತು ಮತ್ತು 2020 ರೊಳಗೆ ಇದು ಭಾರತಕ್ಕೆ ಪೂರೈಕೆಯಾಗಲಿದೆ.
10 P8I ಏರ್ಕ್ರಾಫ್ಟ್ಗಳನ್ನು ಸೇರ್ಪಡೆಗೊಳಿಸುವುದರಿಂದ ನೌಕಾಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ. ಇದು ಚೀನಾದ ನೌಕಾಪಡೆಯು ಹೆಚ್ಚಿಸುತ್ತಿರುವ ನಿಯೋಜನೆಗಳ ಮೇಲೆ ಬಲವಾದ ಕಣ್ಗಾವಲು ಇಡಲು ಸಹಾಯ ಮಾಡುತ್ತದೆ.
P8I ಏರ್ಕ್ರಾಫ್ಟ್ ಹಗುರವಾದ ಟಾರ್ಪಿಡೊಗಳು ಮತ್ತು ಆಳ ಚಾರ್ಜ್ಗಳನ್ನು ಹೊಂದಿದ್ದು, ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಲು ಮತ್ತು ಬೇಟೆಯಾಡುವ ಪರಿಣತಿ ಹೊಂದಿದೆ. ಶೋಧ ಕಾರ್ಯ ಮತ್ತು ಭೂಮಿಯ ಮೇಲೆ ವಿಚಕ್ಷಣೆಗಾಗಿ ಇದನ್ನು ನಿಯೋಜಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.