ನವದೆಹಲಿ: ಭಾರತೀಯ ರೈಲ್ವೇಯ ಟಿಕೆಟಿಂಗ್ ಅಂಗಸಂಸ್ಥೆ ಐಆರ್ಸಿಟಿಸಿ ವತಿಯಿಂದ ನಿರ್ವಹಿಸಲ್ಪಡುವ ಭಾರತದ ಮೊದಲ ಖಾಸಗಿ ರೈಲು ನವರಾತ್ರಿ ಸಮಯದಲ್ಲಿ ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಈ ರೈಲಿನಲ್ಲಿ ವಿಮಾನದ ಮಾದರಿಯ ಸೌಲಭ್ಯಗಳು ಪ್ರಯಾಣಿಕರಿಗೆ ಸಿಗಲಿವೆ.
ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ (ಐಆರ್ಸಿಟಿಸಿ) ವತಿಯಿಂದ ನಿರ್ವಹಿಸಲ್ಪಡುವ ದೆಹಲಿ-ಲಕ್ನೋ ತೇಜಸ್ ಎಕ್ಸ್ಪ್ರೆಸ್ ಅಕ್ಟೋಬರ್ 4 ರಂದು ತನ್ನ ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ, ಆದರೆ ಅಹಮದಾಬಾದ್-ಮುಂಬಯಿ ತೇಜಸ್ ಎಕ್ಸ್ಪ್ರೆಸ್ ರೈಲು ಕುರಿತ ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ದೆಹಲಿ-ಲಕ್ನೋ ತೇಜಸ್ ಎಕ್ಸ್ಪ್ರೆಸ್ ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ಆರು ದಿನಗಳಲ್ಲಿ ಸಂಚರಿಸಲಿದೆ.
ಆರಂಭಿಕ ಓಟಗಳು ಮತ್ತು ಸೇವೆಗಳ ನಂತರ, ಐಆರ್ಸಿಟಿಸಿಯು ತೇಜಸ್ ಎಕ್ಸ್ಪ್ರೆಸ್ ಕಾರ್ಯಾಚರಣೆಯ ಜವಾಬ್ದಾರಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.
ಈ ರೈಲಿನಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ 15 ದಿನಗಳ ಮೊದಲು ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ ಮತ್ತು ಟಿಕೆಟ್ ಶುಲ್ಕಕ್ಕಾಗಿ ಐಆರ್ಸಿಟಿಸಿ ಕ್ರಿಯಾಶೀಲ ಶುಲ್ಕ ಮತ್ತು ಬೆಲೆ ಮಾದರಿಯನ್ನು ನಿಗದಿಪಡಿಸಬಹುದು ಎನ್ನಲಾಗಿದೆ.
ಈ ರೈಲಿನಲ್ಲಿ ಏರ್ ಹೋಸ್ಟೇಸ್ ಮಾದರಿಯಲ್ಲಿ ಉಪಚಾರಿಕೆಯರು ಇರಲಿದ್ದಾರೆ.
ತೇಜಸ್ ಎಕ್ಸ್ಪ್ರೆಸ್ನಲ್ಲಿ ರೈಲು ಚಾಲಕ, ಕಾವಲುಗಾರ, ಆರ್ಪಿಎಫ್ ಅನ್ನು ಭಾರತೀಯ ರೈಲ್ವೆ ಒದಗಿಸಲಿದೆ, ಟಿಕೆಟಿಂಗ್ ಸಿಬ್ಬಂದಿ, ಆನ್ಬೋರ್ಡ್ ಹೌಸ್ ಕೀಪಿಂಗ್ ಮತ್ತು ಅಡುಗೆಯನ್ನು ಐಆರ್ಸಿಟಿಸಿ ನಿರ್ವಹಿಸಲಿದೆ.
ಖಾಸಗಿ ಕಂಪನಿಗಳಿಗೆ ಸೇವೆಗಳನ್ನು ಹಸ್ತಾಂತರಿಸಲು ಐಆರ್ಸಿಟಿಸಿ ಟೆಂಡರ್ ನೀಡುವ ನಿರೀಕ್ಷೆಯಿದೆ. ತೇಜಸ್ ಎಕ್ಸ್ಪ್ರೆಸ್ ರೈಲು ಚಲಾಯಿಸಲು ಐಆರ್ಸಿಟಿಸಿಯು ಭಾರತೀಯ ರೈಲ್ವೆಗೆ ಶುಲ್ಕ ಪಾವತಿ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.