ನವದೆಹಲಿ: ಎರಡು ದಿನಗಳ ಕಾಲ ಜಪಾನಿಗೆ ನೀಡಿದ ಭೇಟಿಯು ಅತ್ಯಂತ ಮಹತ್ವಪೂರ್ಣವಾಗಿತ್ತು ಮತ್ತು ಹಲವು ವಿಧದಲ್ಲಿ ಯಶಸ್ವಿಯಾಗಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
“ಜಪಾನಿಗೆ ನಾನು ನೀಡಿದ ಭೇಟಿಯು ಹಲವು ವಿಧದಲ್ಲಿ ಮಹತ್ವ ಪೂರ್ಣವಾಗಿದ್ದು ಮತ್ತು ಯಶಸ್ವಿಯಾಗಿತ್ತು. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಕೈಜೋಡಿಸಿ ಕಾರ್ಯನಿರ್ವಹಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಯನ್ನು ಈ ಭೇಟಿ ಪುನರಾವರ್ತಿಸಿದೆ” ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಭೇಟಿಯು ಉಭಯ ದೇಶಗಳ ಕಾರ್ಯ ತಾಂತ್ರಿಕವಾಗಿ ಮತ್ತು ರಕ್ಷಣಾ ಸಹಕಾರದೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂಬ ಉಭಯ ದೇಶಗಳ ಆಶಯವನ್ನು ಪುನರುಚ್ಚರಿಸಿದೆ ಎಂದಿದ್ದಾರೆ.
“ಭೇಟಿಯ ವೇಳೆ ಕಾರ್ಯ ತಾಂತ್ರಿಕ ಮತ್ತು ರಕ್ಷಣಾ ಸಹಕಾರವನ್ನು ವೃದ್ಧಿಸಬೇಕು ಎಂಬ ಉಭಯ ದೇಶಗಳ ಆಶಯವನ್ನು ಪುನರುಚ್ಚರಿಸಲಾಗಿದೆ. ಆತ್ಮೀಯ ಸ್ವಾಗತ ಮತ್ತು ಉಪಚಾರ ಮಾಡಿದ ಜಪಾನ್ ಸರ್ಕಾರ ಮತ್ತು ಅಲ್ಲಿನ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದಿದ್ದಾರೆ.
ಸಿಂಗ್ ಅವರು ಸೋಮವಾರ ಸಂಜೆ ಈಸ್ಟ್ ಏಷ್ಯಾ ದೇಶಗಳಿಗೆ ಐದು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಪ್ರವಾಸದ ಮೊದಲ ಹಂತವಾಗಿ ಅವರು ಜಪಾನ್ಗೆ ಭೇಟಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.