ನವದೆಹಲಿ: ‘ಎಲ್ಲರಿಗೂ ಫಿಟ್ನೆಸ್’ ಎಂಬುದು ಕೇಂದ್ರ ಸರಕಾರದ ಮಂತ್ರ. ಇದೇ ಧ್ಯೇಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ. ಇದಕ್ಕೆ ಮಾದರಿ ಎನಿಸುವಂತೆ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ಆರು ಕಿಲೋಮೀಟರ್ ದೂರದವರೆಗೆ ಸೈಕಲ್ ಮೂಲಕ ಸಂಚರಿಸಿ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮಂಗಳವಾರ ಸಚಿವ ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಸೌತ್ ಈಸ್ಟ್ ಏಷ್ಯಾ ಪ್ರಾದೇಶಿಕ ಕಚೇರಿಯ 72ನೇ ಅಧಿವೇಶನದಲ್ಲಿ ಭಾಗಿಯಾಗುವ ಸಲುವಾಗಿ ಹೈಟ್ ಹೋಟೆಲಿಗೆ ಆರು ಕಿಲೋಮೀಟರ್ ಸೈಕ್ಲಿಂಗ್ ಮಾಡಿದ್ದಾರೆ ಮತ್ತು ಯೋಗ ಸೆಪನ್ನಲ್ಲಿ ಭಾಗಿಯಾಗಿದ್ದಾರೆ.
This wraps up today’s coverage of the 72nd Session of the Regional Committee of South-East Asia. Tune back in tomorrow morning for day 2 of #RC72! The second day will start with the Ministerial Roundtable on Emergency Preparedness. pic.twitter.com/xmDi69TJS2
— WHO South-East Asia (@WHOSEARO) September 2, 2019
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಫಿಟ್ ಇಂಡಿಯಾ ಅಭಿಯಾನವನ್ನು ಆರಂಭಿಸಿ, ದೇಶದ ಪ್ರತಿಯೊಬ್ಬರೂ ತಮ್ಮನ್ನು ತಾವು ಸದೃಢವಾಗಿ ಇಟ್ಟುಕೊಳ್ಳಬೇಕು, ಆ ಮೂಲಕ ದೇಶವನ್ನು ಸದೃಢ ಮತ್ತು ಆರೋಗ್ಯಪೂರ್ಣವಾಗಿಸಬೇಕು ಎಂದು ಕರೆ ನೀಡಿದ್ದರು.
ಇದಕ್ಕೆ ಅನುಸಾರವಾಗಿ ಹರ್ಷವರ್ಧನ್ ಅವರು WHO SEARO ಆರೋಗ್ಯ ಸಚಿವರುಗಳ ಸಭೆಗೆ ಸೈಕಲ್ ಮೂಲಕ ಆಗಮಿಸಿದ್ದಾರೆ. ದೆಹಲಿಯ ಭಿಕಜಿ ಕೊಮಾ ಪ್ಲೇಸ್ನ ಹೈಟ್ ಹೋಟೆಲಿನಲ್ಲಿ ಸಭೆ ನಡೆದಿತ್ತು. ಹಲವು ದೇಶಗಳ ಆರೋಗ್ಯ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಯೋಗ ಸೇರಿದಂತೆ ಹಲವು ಕಾರ್ಯಕ್ರಮಗಳು ಜರಗಿತ್ತು.
Watch Live !! Cycling for Health https://t.co/QIPPSCQm5S
— Dr Harsh Vardhan (@drharshvardhan) September 3, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.