ನವದೆಹಲಿ: ದೆಹಲಿಯ ವಾಯುಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹೊಸ ವಾಯು ಸಂಚಾರ ನಿಯಂತ್ರಣ (Air traffic control (ATC)) ಟವರ್ ಅನ್ನು ಸೋಮವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಿಸಲಾಗಿದೆ. ಈ ಹೊಸ ನಿಯಂತ್ರಣ ಟವರ್ ಕಂಟ್ರೋಲರ್ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿವೆ ಮತ್ತು ವಿಳಂಬಗೊಳ್ಳುವುದರಿಂದ ವಾಯುಸಂಚಾರಿಗಳಿಗೆ ರಿಲೀಫ್ ನೀಡಲಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೊಸ ಟವರ್ನ ಕಾರ್ಯಾರಂಭಕ್ಕೆ ಚಾಲನೆಯನ್ನು ನೀಡಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
ರೂ. 250 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದರ ಸಂಕೀರ್ಣವು ಏರೋಡ್ರೋಮ್ ಕಂಟ್ರೋಲ್ ಟವರ್, ಏರಿಯಾ ಅಪ್ರೋಚ್ ಕಂಟ್ರೋಲ್ ಸರ್ವಿಸ್ ಬಿಲ್ಡಿಂಡ್ ಮತ್ತು ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ಎಂಬ ಮೂರು ಕಟ್ಟಡಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ 100 ಕೋಟಿ ರೂಪಾಯಿಗಳನ್ನು ಆಧುನಿಕ ಏರ್ ನಾವಿಗೇಶನ್ ಸಿಸ್ಟಮ್ ಮತ್ತು ಸುಧಾರಿತ ಅಟೋಮೇಶನ್ ಸಿಸ್ಟಮ್, ಏರ್ ಟ್ರಾಫಿಕ್ ಆಪರೇಶನ್ ಸಾಮರ್ಥ್ಯಗಳಿಗಾಗಿ ವ್ಯಯ ಮಾಡಲಾಗಿದೆ. ಹಳೆಯ ಟವರ್ ಕೂಡ ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಮತ್ತು ಹೊಸ ಟವರಿಗೆ ಬ್ಯಾಕ್ ಅಪ್ ಆಗಿ ಕಾರ್ಯನಿರ್ವಹಣೆ ಮಾಡಲಿದೆ.
101.9 ಮೀಟರ್ ಎತ್ತರ ಇರುವ ಹೊಸ ಟವರ್, ದೇಶದ ಅತೀ ಎತ್ತರದ ಎಟಿಸಿ ATC ರಚನೆಯಾಗಿದೆ.ಇದು 45 ಕ್ಕೂ ಹೆಚ್ಚು ವರ್ಕ್ಸ್ಟೇಶನ್ಗಳನ್ನು ಹೊಂದಿದೆ. ಹಳೆಯ ಕಟ್ಟಡವು ಕೇವಲ 30 ವರ್ಕ್ಸ್ಟೇಶನ್ಗಳಿಗೆ ಮಾತ್ರ ಸ್ಥಳಾವಕಾಶ ನೀಡಿತ್ತು. ದೇಶದ ಅತೀ ಎತ್ತರದ ಟವರ್ ಉತ್ತಮ ಕಾರ್ಯಾಚರಣಾ ವಿಸಿಬಿಲಿಟಿಯನ್ನೂ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.