ನವದೆಹಲಿ: ಇಬ್ಬರು ಶಾಲಾ ಮಕ್ಕಳು ರಸ್ತೆಯಲ್ಲಿ ಲಾಗ ಹಾಕಿರುವ ವೀಡಿಯೋಗಳು ಭಾರೀ ವೈರಲ್ ಆಗಿದೆ. ಸಮವಸ್ತ್ರ ತೊಟ್ಟು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯೊಬ್ಬ ಲಾಗ (ಸೊಮೆರ್ಸಾಲ್ಟ್) ಹಾಕಿದ್ದಾರೆ. ಇದನ್ನು ಒಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಟ್ವಿಟರಿನಲ್ಲಿ ಮಕ್ಕಳ ವೀಡಿಯೋ ಭಾರೀ ವೈರಲ್ ಆಗಿದ್ದು, 1.1 ಮಿಲಿಯನ್ ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.
ಈ ವೀಡಿಯೋಗೆ ವಿಶ್ವದ ಶ್ರೇಷ್ಠ ಜಿಮ್ನಾಸ್ಟಿಕ್ ಪಟು, ಐದು ಬಾರಿ ಒಲಿಂಪಿಕ್ ಪದಕ ವಿಜೇತೆ ನಾಡಿಯಾ ಕೊಮನೆಸಿ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು, ಈ ಮಕ್ಕಳು ಅದ್ಭುತ ಎಂದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು ನಾಡಿಯಾ ಅವರ ಟ್ವಿಟ್ ಅನ್ನು ಹಂಚಿಕೊಂಡಿದ್ದು, ಇಬ್ಬರು ಮಕ್ಕಳನ್ನು ತಮಗೆ ಪರಿಚಯಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
I’m happy that @nadiacomaneci10 tweeted it! As first gymnast who scored perfect 10.0 at the 1976 Montreal Olympics, and then, received six more perfect 10s to win three gold medals, it becomes very special. I’ve urged to introduce these kids to me. https://t.co/ahYVws8VCB
— Kiren Rijiju (@KirenRijiju) August 30, 2019
“ಈ ಮಕ್ಕಳು ಬೆಳೆಯುವ ಪ್ರತಿಭೆಗಳು. ಯಾರಾದರು ಇವರನ್ನು ನನ್ನ ಬಳಿಗೆ ಕರೆದುಕೊಂಡು ಬಂದರೆ ಜಿಮ್ನಾಸ್ಟಿಕ್ ಅಕಾಡಮಿಗೆ ಸೇರಿಸುವ ಕಾರ್ಯ ಮಾಡುತ್ತೇನೆ” ಎಂದಿದ್ದಾರೆ.
These kids are raw talents. Will get them connected to a gymnastic academy if someone brings them to me. https://t.co/Nj5CWuT1KG
— Kiren Rijiju (@KirenRijiju) August 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.