ನವದೆಹಲಿ: ಮಲೇಷ್ಯಾದ ಕೌಲಾಲಂಪುರದಲ್ಲಿ ಏಷ್ಯನ್ ಸ್ಪೋರ್ಟ್ಸ್ ರೈಟರ್ಸ್ ಯೂನಿಯನ್ ಆಯೋಜಿಸಿದ್ದ ಮೊದಲ ‘ಅವಾರ್ಡ್ಸ್ ಫಾರ್ ಏಷ್ಯಾ’ ಸಮಾರಂಭದಲ್ಲಿ ಭಾರತದ ತಾರಾ ಬಾಕ್ಸರ್ ಮೇರಿ ಕೋಮ್ ಅವರನ್ನು ಏಷ್ಯಾದ ಅತ್ಯುತ್ತಮ ಮಹಿಳಾ ಕ್ರೀಡಾಪಟು ಎಂದು ಘೋಷಿಸಲಾಗಿದೆ.
ಏಷ್ಯಾದ ಮಹಿಳಾ ಬಾಕ್ಸಿಂಗ್ ಕ್ಷೇತ್ರದಲ್ಲಿ 36 ವರ್ಷದ ಮೇರಿ ಕೋಮ್ ಅವರು ಮಾಡಿದ ಅತ್ಯದ್ಭುತ ಸಾಧನೆಗಾಗಿ ಈ ಬಹುಮಾನ ಪಡೆದಿದ್ದಾರೆ. ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಏಕೈಕ ಮಹಿಳಾ ಬಾಕ್ಸರ್ ಮೇರಿ ಕೋಮ್. ಅವರು ಏಳು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಪ್ರತಿಯೊಂದರಲ್ಲೂ ಪದಕ ಗೆದ್ದು ಸಾಧನೆಯನ್ನು ಮಾಡಿದ್ದಾರೆ.
2018ರ ನವೆಂಬರ್ನಲ್ಲಿ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಅವರು ದಾಖಲೆಯ ಆರನೇ ಮಹಿಳಾ ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಪಂದ್ಯಾವಳಿಯಲ್ಲಿ ಅವರು 48 ಕೆಜಿ ಲೈಟ್ ಫ್ಲೈ ವೇಟ್ ವಿಭಾಗದ ಫೈನಲ್ನಲ್ಲಿ ಉಕ್ರೇನ್ನ ಹನ್ನಾ ಒಖೋಟಾ ಅವರನ್ನು ಸೋಲಿಸಿದ್ದರು.
ಈ ಗೆಲುವು ಮಣಿಪುರಿಯ ಈ ಬಾಕ್ಸರ್ ಅನ್ನು ವಿಶ್ವ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲೆರಡರಲ್ಲೂ ಜಂಟಿ ಅತ್ಯಂತ ಯಶಸ್ವಿ ಬಾಕ್ಸರ್ ಎಂಬ ದಾಖಲೆ ಬರೆಯುವಂತೆ ಮಾಡಿತು. ಈ ಮೂಲಕ ಅವರು ಕ್ಯೂಬನ್ ಲೆಜೆಂಡರಿ ಬಾಕ್ಸರ್ ಫೆಲಿಕ್ಸ್ ಸಾವನ್ ಅವರ ದಾಖಲೆಯನ್ನು ಪುಡಿಗಟ್ಟಿದರು.
ಸೆಪ್ಟೆಂಬರ್ 7 ರಿಂದ 21 ರವರೆಗೆ ರಷ್ಯಾದ ಯೆಕಟೆರಿನ್ಬಗ್ನಲ್ಲಿ ನಡೆಯಲಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಅವರು ತಮ್ಮ 8ನೇ ವಿಶ್ವ ಚಾಂಪಿಯನ್ ಅನ್ನು ಪಡೆಯುವ ನಿರೀಕ್ಷೆ ಇದೆ. 2020 ರ ಟೋಕಿಯೊ ಒಲಿಂಪಿಕ್ಸ್ನಲ್ಲೂ ಭಾಗವಹಿಸಲಿದ್ದಾರೆ.
Mary Kom adjudged best Asian female athlete at the 1st ever ‘Awards for Asia’ ceremony organised by Asian Sportswriters Union (AIPS Asia) in Malaysia, many congratulations to her!#BlueRising #Boxing #MaryKom @MangteC @BFI_official pic.twitter.com/qJkoThsCJc
— Indian Sports Honours (@sportshonours) August 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.