ನವದೆಹಲಿ: ಭಾರತದಾದ್ಯಂತ 12,500 ಆಯುಷ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ, ಅದರಲ್ಲಿ 4,000 ಆಯುಷ್ ಕೇಂದ್ರಗಳನ್ನು ಈ ವರ್ಷವೇ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯೋಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದ ಅವರು, “ಒಂದು ರಾಷ್ಟ್ರ, ಒಂದು ತೆರಿಗೆ ಮತ್ತು ಒಂದು ಮೊಬಿಲಿಟಿ ಕಾರ್ಡ್ನ ಮಾದರಿಯಲ್ಲೇ “ಆಯುಷ್ ಗ್ರಿಡ್” ಅನ್ನು ರಚಿಸುವ ಮೂಲಕ ಏಕರೂಪದ ವ್ಯವಸ್ಥೆಯನ್ನು ತರುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.
“ಆಯುಷ್ ಗ್ರಿಡ್” ಆಯುಷ್ ವಲಯದಲ್ಲಿನ ಅಡೆತಡೆಯನ್ನು ನಿವಾರಿಸುತ್ತದೆ. ನಾವು 1.5 ಲಕ್ಷ ಆರೋಗ್ಯ, ವೆಲ್ನೆಸ್ ಕೇಂದ್ರಗಳನ್ನು ತೆರೆಯುತ್ತಿದ್ದೇವೆ” ಎಂದು ಅವರು ಹೇಳಿದರು.
ಆಯುಷ್ ಚಿಕಿತ್ಸಾ ಕ್ರಮದಲ್ಲಿ ತಂತ್ರಜ್ಞಾನವನ್ನು ಸಂಪ್ರದಾಯದೊಂದಿಗೆ ಸಂಪರ್ಕಿಸಬೇಕೆಂದು ಅವರು ಪ್ರತಿಪಾದಿಸಿದರು.
ಆಯುಷ್ ಕ್ಷೇತ್ರದಲ್ಲಿ ಹೆಚ್ಚಿನ ವೃತ್ತಿಪರರನ್ನು ಕರೆತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
ತಮ್ಮ ಭಾಷಣದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಲಾಭಗಳ ಬಗ್ಗೆ ಒತ್ತಿ ಹೇಳಿದರು ಮತ್ತು ಇದು ದೇಶದ ಬಡ ಜನರ 12,000 ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದರು.
ಆಯುಷ್ ಮತ್ತು ಯೋಗ ‘ಫಿಟ್ ಇಂಡಿಯಾ’ ಚಳವಳಿಯ ಎರಡು ಬಲವಾದ ಸ್ತಂಭಗಳಾಗಿವೆ. ಪ್ರಕೃತಿ ಚಿಕಿತ್ಸೆಯು ಒಂದು ಜೀವನ ವಿಧಾನ ಎಂದು ಮಹಾತ್ಮ ಗಾಂಧಿ ನಂಬುತ್ತಿದ್ದರು. ಭಾರತವು ಆಯುರ್ವೇದ ಮತ್ತು ಯೋಗದ ಮಹತ್ವವನ್ನು ತಿಳಿಸುವ ವಿಶಾಲ ಮತ್ತು ಪ್ರಾಚೀನ ಗ್ರಂಥಗಳನ್ನು ಹೊಂದಿದೆ ಎಂದಿದ್ದಾರೆ.
ಸಮಾರಂಭದಲ್ಲಿ ಮೋದಿಯವರು, ವಿದ್ವಾಂಸರು, ವೈದ್ಯರು ಮತ್ತು ಆಯುಷ್ ಚಿಕಿತ್ಸಾ ಪಂಡಿತರ ಗೌರವಾರ್ಥ 12 ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.