ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರು ಸೆಪ್ಟೆಂಬರ್ 3 ರಂದು ಅಮೆರಿಕಾ ನಿರ್ಮಿತ ಅಪಾಚೆ ಎಹೆಚ್-64 ಇ (ಐ) ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ವಾಯುಸೇನೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಇಡಲಾದ ಮಹತ್ವದ ಹೆಜ್ಜೆ ಇದಾಗಿದೆ.
4 ಅಪಾಚೆ ಹೆಲಿಕಾಪ್ಟರ್ಗಳನ್ನು ನೆರೆಯ ಪಾಕಿಸ್ಥಾನದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ಪ್ರಧಾನ ವಾಯುನೆಲೆ ಎಂದೇ ಪರಿಗಣಿಸಲಾಗಿರುವ ಪಠಾಣ್ಕೋಟ್ ವಾಯುಪಡೆ ನೆಲೆಯಲ್ಲಿ ನಿಯೋಜನೆಗೊಳಿಸಲಾಗುತ್ತಿದೆ. 370ನೇ ವಿಧಿ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.
ವಾಯುಸೇನೆ ವಕ್ತಾರರ ಪ್ರಕಾರ, 2015ರ ಸೆಪ್ಟೆಂಬರ್ ತಿಂಗಳಿನಲ್ಲಿ ಯುಎಸ್ ರಕ್ಷಣಾ ದೈತ್ಯ ಬೋಯಿಂಗ್ ಜೊತೆ ಭಾರತವು 22 ಅಪಾಚೆ ಹೆಲಿಕಾಫ್ಟರ್ಗಳಿಗಾಗಿ 1.1 ಬಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿದೆ. ತನ್ನ ದಾಳಿ ಸಾಮರ್ಥ್ಯವನ್ನು ತೀಕ್ಷ್ಣಗೊಳಿಸುವ ಉದ್ದೇಶದಿಂದ ಭಾರತ ಈ ಒಪ್ಪಂದವನ್ನು ಮಾಡಿಕೊಂಡಿದೆ. ಈಗಾಗಲೇ ಬೋಯಿಂಗ್ ಸರಬರಾಜು ಮಾಡಿರುವ 8 ಹೆಲಿಕಾಫ್ಟರ್ಗಳೊಂದಿಗೆ ಮೊದಲ ಅಪಾಚೆ ಸ್ಕ್ರಾಡ್ರನ್ ಅನ್ನು ರಚನೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬೋಯಿಂಗ್ ಭಾರತದ ವಾಯುಸೇನೆಗೆ ಅನುಗುಣವಾಗಿ ತಯಾರು ಮಾಡಿರುವ ಎಲ್ಲಾ 22 ಅಪಾಚೆ ಹೆಲಿಕಾಪ್ಟರ್ಗಳನ್ನು 2020 ರೊಳಗೆ ಪೂರೈಕೆ ಮಾಡುವ ಸಾಧ್ಯತೆಯಿದೆ.
ವಾಯುಸೇನೆ ಪ್ರಸ್ತುತ ಸೋವಿಯತ್ ಮೂಲದ ಮಿ -25 ಮತ್ತು ಮಿ -35 ಹೆಲಿಕಾಪ್ಟರ್ ಗನ್ಶಿಪ್ಗಳನ್ನು ನಿರ್ವಹಿಸುತ್ತಿದೆ.
ಫೈಯರ್ ಆ್ಯಂಡ್ ಪಾರ್ಗೆಟ್ ಹೆಲ್ಫೈರ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾಗಿರುವ ಅಪಾಚೆ ಅಟ್ಯಾಕ್ ಹೆಲಿಕಾಫ್ಟರ್ಗಳು ಒಂದು ನಿಮಿಷದಲ್ಲಿ 128 ಗುರಿಗಳನ್ನು ಪತ್ತೆಹಚ್ಚಬಲ್ಲದು ಮತ್ತು ಬೆದರಿಕೆಗಳಿಗೆ ಸವಾಲೊಡ್ಡಬಲ್ಲದು. ಈ ಕ್ಷಿಪಣಿಗಳು ಗನ್ಶಿಪ್ಗಳನ್ನು ಭಾರೀ ಶಸ್ತ್ರಾಸ್ತ್ರ ವಿರೋಧಿ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸುತ್ತವೆ.
ವಿಂಗ್ ಕಮಾಂಡರ್ ಅಭಿನಂದನ್ ಅವರು ಸೆ. 3 ರಂದೇ ಪಠಾಣ್ಕೋಟ್ ವಾಯುಪಡೆ ನೆಲೆಯಿಂದ ಮಿಗ್ ವಿಮಾನವನ್ನು ಹಾರಿಸಬಹುದು ಎಂಬ ಬಗ್ಗೆ ಮಾತುಗಳೂ ಕೇಳಿ ಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.