ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರವನ್ನು ನಡೆಸುವ ಗುಂಪಿನ ನಿಜ ಮುಖವನ್ನು ಬಯಲು ಮಾಡುತ್ತಿರುವ ಹೋರಾಟಗಾರ ಮರಿದಾಸ್ ಅವರು ಸತತವಾಗಿ ಡಿಎಂಕೆ ಪಕ್ಷದ ದಾಳಿಯನ್ನು ಎದುರಿಸುತ್ತಿದ್ದಾರೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಡಿಎಂಕೆ ಮುಂದಾಗಿದೆ.
ಡಿಎಂಕೆ ಪಕ್ಷದ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರು ಮರಿದಾಸ್ ವಿರುದ್ಧ ಸೆಕ್ಷನ್ 505 (2) ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಕರೆ ನೀಡಿದ್ದಾರೆ. ಅಲ್ಲದೇ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅವರ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ನಿಷೇಧಿಸುವಂತೆ ಕೋರಿದ್ದಾರೆ.
ಮರಿದಾಸ್ ಅವರು ತಮಿಳು ರಾಷ್ಟ್ರವಾದಿಗಳ ಮತ್ತು ಪ್ರತ್ಯೇಕಾವಾದಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ. ಸೂಕ್ತವಾದ ದಾಖಲೆಗಳನ್ನು ಜನರ ಮುಂದಿಟ್ಟು ಅವರ ನಿಜಮುಖವನ್ನು ಬಯಲು ಮಾಡುತ್ತಿದ್ದಾರೆ. ಹೀಗಾಗಿ ಡಿಎಂಕೆ ಅವರ ಧ್ವನಿಯನ್ನು ಹುದುಗಿಸಲು ಮುಂದಾಗಿದೆ ಮತ್ತು ಅವರನ್ನು ಜೈಲಿಗಟ್ಟಲು ಏರ್ಪಾಡು ಮಾಡುತ್ತಿದೆ.
ಆದರೆ ಮರಿದಾಸ್ ಅವರಿಗೆ ಅಭೂತಪೂರ್ವವಾದ ರೀತಿಯಲ್ಲಿ ಜನರಿಗೆ ಬೆಂಬಲ ವ್ಯಕ್ತವಾಗುತ್ತಿದೆ. #ISupportMaridhas ಈಗ ಭಾರೀ ಟ್ರೆಂಡ್ ಆಗುತ್ತಿದೆ. ಟ್ವಿಟರ್ ಇಂಡಿಯಾದಲ್ಲಿ ನಂ.1 ಟ್ರೆಂಡಿಂಗ್ ವಿಷಯವಾಗಿತ್ತು. ಬಳಿಕ ಎರಡನೇ ಸ್ಥಾನಕ್ಕೆ ಬಂದಿತ್ತು.
ಈ ಹ್ಯಾಶ್ಟ್ಯಾಗ್ 1 ಲಕ್ಷಕ್ಕೂ ಹೆಚ್ಚು ಟ್ವೀಟ್ಗಳನ್ನು ನೋಂದಾಯಿಸಿದೆ ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ಮರಿದಾಸ್ ಅವರ ವಿರೋಧಿಗಳು #ಮೆಂಟಲ್ ಮರಿದಾಸ್ ಅನ್ನು ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದರು. ಇದು ಪ್ರಸ್ತುತ ಭಾರತದ ಟ್ವಿಟರ್ ಟ್ರೆಂಡ್ಗಳಲ್ಲಿ ಐದನೇ ಸ್ಥಾನದಲ್ಲಿತ್ತು.
I support Maridhas Bro, who fights against Antinational , AntiSocial & Anti Hindu elements in TN#ISupportMaridhas#WeSupportMaridhas pic.twitter.com/DyOZEf1khs
— ChowkidarGurusigaman (@lgs21061970) August 27, 2019
Maridhas has been royally exposing the rot in his brilliant videos. the Dravidian, separatists groups are rattled. #ISupportMaridhas
— krithika sivaswamy (@krithikasivasw) August 27, 2019
Every Nationalist will wholeheartedly support u Brother 🙏🇮🇳#ISupportMaridhas pic.twitter.com/xy3wcFbsjL
— krishna my friend ॐ (@krishna_my) August 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.