ನವದೆಹಲಿ: ಗ್ರಾಮ್ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ 10 Mbpsನಿಂದ 100 Mbps ವೇಗದ ಸಂಪರ್ಕವನ್ನು ಹೊಂದಿರುವ ವೈ-ಫೈ ಅನ್ನು ಒದಗಿಸುವ ಬದ್ಧತೆಯನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಅಲ್ಲದೇ ಭಾರತ್ನೆಟ್ ಕೂಡ 1 GBPS ಸಂಪರ್ಕವನ್ನು ನೀಡಲು ಯೋಜಿಸಿದೆ. ಇದನ್ನು 10 GBPS ಮತ್ತು ಸಿ-ಡಾಟ್ನ XGS-PONವರೆಗೆ ವಿಸ್ತರಿಸಬಹುದಾಗಿದೆ.
ಸಿ-ಡಾಟ್ನ 36 ನೇ ಪ್ರತಿಷ್ಠಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರದ ರಾಜ್ಯ ಖಾತೆ ಸಂವಹನ ಸಚಿವ ಸಂಜಯ್ ಶಮರಾವ್ ಧೋತ್ರೆ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
“ಭಾರತವು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಇದು ಸ್ವಾವಲಂಬಿ ಭಾರತೀಯ ಗ್ರಾಮದ ಕನಸನ್ನು ಕಂಡಿದ್ದ ಬಾಪುಗೆ ನೀಡುತ್ತಿರುವ ನಿಜವಾದ ಗೌರವವಾಗಿದೆ. ಸಿ-ಡಾಟ್ನ ಸಿ-ಸ್ಯಾಟ್-ಫೈ ತಂತ್ರಜ್ಞಾನವು ಭಾರತೀಯ ಜನರಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಿಗೆ ಪ್ರಯೋಜನಕಾರಿಯಾಗಿದೆ. ಟೆಲಿಫೋನ್ ಮತ್ತು ವೈ-ಫೈ ಸೌಲಭ್ಯಗಳು ದೇಶದ ಎಲ್ಲಾ ಮೂಲೆಗಳಲ್ಲಿನ ಯಾವುದೇ ಮೊಬೈಲ್ ಫೋನ್ನಲ್ಲಿ ಲಭ್ಯವಾಗುವುದರಿಂದ ಇದು ಜನರ ಸಬಲೀಕರಣಕ್ಕೆ ನಾಂದಿ ಹಾಡುತ್ತದೆ” ಎಂದು ಧೋತ್ರೆ ಹೇಳಿದರು.
ಫೈಬರ್ ಕಷ್ಟ ಮತ್ತು ಇಂಟರ್ನೆಟ್ ಲಭ್ಯವಿಲ್ಲದ ದೂರದ ಪ್ರದೇಶಗಳಲ್ಲಿನ ಜನರನ್ನು ಈ ಹೊಸ ತಂತ್ರಜ್ಞಾನವು ಉಪಗ್ರಹಗಳ ಮೂಲಕ ಸಂಪರ್ಕಿಸುವುದರಿಂದ ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡುತ್ತದೆ ಎಂದರು.
ಸಿ-ಡಾಟ್ನ ಇತ್ತೀಚಿನ ಆವಿಷ್ಕಾರಗಳಾದ “ಸಿ-ಸ್ಯಾಟ್-ಫೈ ಮತ್ತು “ಸಿ-ಡಾಟ್ನ ಇಂಟರೊಪರೇಬಲ್ ಸೆಟ್ ಟಾಪ್ ಬಾಕ್ಸ್ (ಸಿಐಎಸ್ಟಿಬಿ)ಗಳಿಗೆ ಸಚಿವರು ಚಾಲನೆಯನ್ನು ನೀಡಿದರು. ದೂರದ ದ್ವೀಪಗಳು ಮತ್ತು ಕಷ್ಟಕರವಾದ ಭೂಪ್ರದೇಶಗಳು ಸೇರಿದಂತೆ ಅಸುರಕ್ಷಿತ ಪ್ರದೇಶಗಳಿಗೆ ಸಂಪರ್ಕವನ್ನು ವಿಸ್ತರಿಸಲು ಸಿ-ಸ್ಯಾಟ್-ಫೈ (ಸಿ-ಡಾಟ್ ಸ್ಯಾಟಲೈಟ್ ವೈಫೈ) ವೈರ್ಲೆಸ್ ಮತ್ತು ಉಪಗ್ರಹ ಸಂವಹನದ ಅತ್ಯುತ್ತಮ ಬಳಕೆಯನ್ನು ಆಧರಿಸಿದೆ.
ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲೂ ಇದು ಅತ್ಯುತ್ತಮ ರೀತಿಯಲ್ಲಿ ಜನರ ನೆರವಿಗೆ ಧಾವಿಸಲು ಸಹಾಯವನ್ನು ಮಾಡಬಲ್ಲವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.