ಚೆನ್ನೈ: ಭಾರತವು ತನ್ನ ಸುಧಾರಿತ ಕಾರ್ಟೋಗ್ರಫಿ ಸ್ಯಾಟಲೈಟ್ ಆದ ಕಾರ್ಟೊಸ್ಯಾಟ್ -3 ಅನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಉಡಾವಣೆಗೊಳಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದ್ದಾರೆ.
“ಇಸ್ರೋದ ಮುಂದಿನ ಉಡಾವಣೆಯು ಕಾರ್ಟೋಗ್ರಫಿ ಸ್ಯಾಟಲೈಟ್ ಕಾರ್ಟೊಸ್ಯಾಟ್ -3 ಆಗಿದೆ. ಉಡಾವಣೆಯು ಅಕ್ಟೋಬರ್ ಅಂತ್ಯ ಅಥವಾ ಈ ವರ್ಷದ ನವೆಂಬರ್ ಆರಂಭದಲ್ಲಿರುತ್ತದೆ” ಎಂದು ಸಿವನ್ ಹೇಳಿದ್ದಾರೆ.
ಕಾರ್ಟೋಸ್ಯಾಟ್ -3 ಅನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹ್ಹಿಕಲ್ (ಪಿಎಸ್ಎಲ್ವಿ) ರಾಕೆಟ್ ಬಳಸಿ ಉಡಾವಣೆಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಟೊಸ್ಯಾಟ್ -2 ಸರಣಿ ಉಪಗ್ರಹಗಳಿಗೆ ಹೋಲಿಸಿದರೆ ಭೂಮಿಯ ಪರಿವೀಕ್ಷಣಾ ಅಥವಾ ದೂರಸ್ಥ ಸಂವೇದನಾ ಉಪಗ್ರಹವಾದ ಕಾರ್ಟೊಸಾಟ್ -3 ಉತ್ತಮ ಪ್ರಾದೇಶಿಕ ಮತ್ತು ಸ್ಪೆಕ್ಟ್ರಲ್ ಗುಣಲಕ್ಷಣಗಳನ್ನು ಹೊಂದಿರುವ ಸುಧಾರಿತ ಆವೃತ್ತಿಯಾಗಿದೆ ಎಂದರು.
ಕಾರ್ಟೊಸಾಟ್ -3 ಉತ್ತಮ ಚಿತ್ರಗಳೊಂದಿಗೆ ಕಾರ್ಯತಾಂತ್ರಿಕ ಅನ್ವಯಿಕೆಗಳನ್ನು ಕೂಡ ಹೊಂದಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.