ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಅಮೆರಿಕದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ ಸಮುದಾಯವು ಅಭೂತಪೂರ್ವವಾಗಿ ಸ್ವಾಗತ ಮಾಡಿದೆ. ಭಾರತ ಸರ್ಕಾರದ ಈ ಮಹತ್ವಪೂರ್ಣ ನಿರ್ಧಾರವನ್ನು ಬೆಂಬಲಿಸಲು ಅದು ಸಮಾವೇಶವನ್ನು ನಡೆಸಿದೆ.
ಆಗಸ್ಟ್ 5 ರಂದು ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸಿತು ಮತ್ತು ಆಗಸ್ಟ್ 6 ರಂದು ಸಂಸತ್ತಿನ ಅನುಮೋದನೆ ಪಡೆದು ರಾಜ್ಯವನ್ನು ವಿಭಜನೆ ಮಾಡಲು ಪ್ರಸ್ತಾಪಿಸಿತು. ಹೀಗಾಗಿ ಜಮ್ಮು ಕಾಶ್ಮೀರ ಮತ್ತು ಲಡಾಕ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಹೊರಹೊಮ್ಮಿವೆ.
ಭಾರತ ಸರ್ಕಾರದ ಈ ಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ಕಾಶ್ಮೀರಿ ಪಂಡಿತರು ಮತ್ತು ಭಾರತೀಯ-ಅಮೆರಿಕನ್ ಸಮುದಾಯದ ಇತರ ಸದಸ್ಯರು ಜಾರ್ಜಿಯಾದ ಅಟ್ಲಾಂಟಾದ ಸಿಎನ್ಎನ್ ಕೇಂದ್ರ ಕಚೇರಿಯ ಮುಂದೆ ಸಮಾವೇಶವನ್ನು ನಡೆಸಿದರು.
ಈ ಸಮಾವೇಶದಲ್ಲಿ ಹಲವಾರು ಕಾಶ್ಮೀರಿ ಪಂಡಿತರು ತಮ್ಮ ಕೆಟ್ಟ ಅನುಭವಗಳ ಬಗ್ಗೆ ನೋವನ್ನು ಹಂಚಿಕೊಂಡಿದ್ದು, 1990ರಲ್ಲಿ ಭಯೋತ್ಪಾದನೆಯ ಕಾರಣದಿಂದಾಗಿ ನಾವು ತೊರೆದ ನಮ್ಮ ನೆಲೆಗೆ ಈಗ ವಾಪಾಸ್ ಹೋಗಲು ಬಯಸುತ್ತಿದ್ದೇವೆ ಎಂದು ಹಲವಾರು ಮಂದಿ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೋದಿ ಸರ್ಕಾರದ ಈ ಹೊಸ ಸ್ವಾತಂತ್ರ್ಯದ ಕೃಪೆಯಡಿಯಲ್ಲಿ, ಭಾರತದ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರು ಈಗ ಕಾನೂನಿನ ಮುಂದೆ ಸಮಾನರಾಗಿ ಉತ್ತಮ ಅವಕಾಶವನ್ನು ಹೊಂದುತ್ತಿದ್ದಾರೆ ಎಂದು ಕಾಶ್ಮೀರ ಪಂಡಿತರಾದ ಸುಭಾಷ್ ರಝ್ದಾನ್ ಇಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇವರು ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ಅಮೆರಿಕನ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.