ನವದೆಹಲಿ: ಕೆಲವರಿಗೆ ತವರು, ಅನೇಕರಿಗೆ ನೆಲೆಯಾಗಿರುವ ಮದ್ರಾಸ್ ಈಗಿನ ಚೆನ್ನೈ 380 ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಅನೇಕ ಮಂದಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಚೆನ್ನೈ ಮೇಲಿನ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಚೆನ್ನೈ ನಿವಾಸಿಗಳು, ಚೆನ್ನೈನಲ್ಲೇ ನೆಲೆ ಕಂಡಿರುವ ದೇಶದ ಇತರ ಭಾಗದ ಜನರು ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಚೆನ್ನೈಗೆ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ ಮತ್ತು ಚೆನ್ನೈನಲ್ಲಿನ ತಮ್ಮ ಸುಮಧುರ ಅನುಭವಗಳನ್ನು ಹಂಚಿಕೊಂಡಿದ್ದಾರೆ.
1639ರ ಆಗಸ್ಟ್ 22ರಂದು ಸ್ಥಾಪನೆಯಾದ ಚೆನ್ನಪಟ್ಟಣಂ ನಗರವನ್ನು ನಂತರ ಮದ್ರಾಸ್ಪಟ್ಟಿನಂ ಎಂದು ಮರುನಾಮಕರಣ ಮಾಡಲಾಯಿತು. ಬಳಿಕ ಜನರು ಇದನ್ನು ಮದ್ರಾಸ್ ಎಂದು ಕರೆಯಲು ಪ್ರಾರಂಭಿಸಿದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 1639 ರಲ್ಲಿ ಮದರಸಪಟ್ಟಣಂ ಗ್ರಾಮವನ್ನು ಖರೀದಿಸಿತು, ನಂತರ ಮದ್ರಾಸ್ ಸ್ಥಾಪನೆಯನ್ನು ಅಧಿಕೃತವಾಗಿ ಮಾಡಿತು.
1996 ರಲ್ಲಿ, ತಮಿಳುನಾಡು ಸರ್ಕಾರ ಅಧಿಕೃತವಾಗಿ ಇದರ ಹೆಸರನ್ನು ಚೆನ್ನೈ ಎಂದು ಬದಲಾಯಿಸಿತು. ಈಗಲೂ 90ರ ಮೊದಲು ಜನಿಸಿದವರಿಗೆ ಚೆನ್ನೈ ಮದ್ರಾಸ್ ಆಗಿಯೇ ಉಳಿದಿದೆ.
ಚಲನಚಿತ್ರ ಉದ್ಯಮಕ್ಕೆ ಭಾರೀ ಹೆಸರುವಾಸಿಯಾಗಿರುವ ಚೆನ್ನೈ ದೇಗುಲಗಳಿಗೂ ಹೆಸರುವಾಸಿಯಾಗಿದೆ. ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರಾದ ನೂರು ವರ್ಷಗಳಷ್ಟು ಹಳೆಯದಾದ ಕಪಲೀಶ್ವರ ದೇವಸ್ಥಾನ ಮತ್ತು ಏಕಂಬರೇಶ್ವರ ದೇವಸ್ಥಾನಗಳು ಇಲ್ಲಿವೆ. ಭಾರತದ ಮೊದಲ ಬ್ರಿಟಿಷ್ ಕೋಟೆ ಸೇಂಟ್ ಜಾರ್ಜ್ ಇಲ್ಲೇ ಇದೆ. ಇಲ್ಲಿರುವ ಮರೀನಾ ಬೀಚ್ ದೇಶದ ಅತೀ ಉದ್ದದ ಬೀಚ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.