ಪರ್ತ್: ಗುರುನಾನಕ್ ಅವರ 550ನೇ ಜಯಂತಿ ಸ್ಮರಣಾರ್ಥ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಆಸ್ಟ್ರೇಲಿಯಾದ ಸಿಖ್ ಹೆರಿಟೇಜ್ ಅಸೋಸಿಯೇಷನ್ ಸಹಯೋಗದೊಂದಿಗೆ ಪರ್ತ್ನ ಕಾನ್ಸುಲೇಟ್ ಜನರಲ್, ಗುರುನಾನಕ್ ಅವರ ಬೋಧನೆ ಮತ್ತು ಸಿಖ್ ಇತಿಹಾಸದ ಬಗೆಗಿನ ಆಸಕ್ತಿದಾಯಕ ಮತ್ತು ಮಾಹಿತಿಯನ್ನು ನೀಡುವ ಎಕ್ಸಿಬಿಷನ್ ಅನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದ, ರಾಜಕೀಯ, ಉದ್ಯಮ, ಶೈಕ್ಷಣಿಕ ಕ್ಷೇತ್ರಗಳ ಸುಮಾರು 170 ಗಣ್ಯರು ಭಾಗವಹಿಸಿದ್ದರು. ವಿಶ್ವದ ಅನೇಕ ಭಾಷೆಗಳಲ್ಲಿ ಗುರುನಾನಕ್ ದೇವ್ ಅವರ ಬರಹಗಳನ್ನು ಭಾಷಾಂತರ ಮಾಡಿ ಪ್ರಕಟಿಸುವ ಯೋಜನೆಯನ್ನು ಯುನೆಸ್ಕೋ ಕೈಗೆತ್ತಿಕೊಂಡಿದೆ.
ಗುರುನಾನಕ್ ಸಿಖ್ ಧರ್ಮದ ಸ್ಥಾಪಕ ಮತ್ತು ಹತ್ತು ಸಿಖ್ ಗುರುಗಳ ಪೈಕಿ ಮೊದಲನೇಯವರು. ಅವರ ಜನನವನ್ನು ವಿಶ್ವಾದ್ಯಂತ ಗುರುನಾನಕ್ ಗುರುಪುರಬ್ ಎಂದು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುವ ಕರ್ಕಾಟಕ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಇವರು 1469ರ ನವೆಂಬರ್ನಲ್ಲಿ ಜನಿಸಿದ್ದರು ಮತ್ತು 1539ರ ಸೆಪ್ಟಂಬರ್ 22ರಂದು ಇಹಲೋಕ ತ್ಯಜಿಸಿದರು.
ಗುರುನಾನಕ್ ಅವರ ಮಾತುಗಳನ್ನು ಸಿಖ್ ಧರ್ಮದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೀಬಿನಲ್ಲಿ 974 ಕಾವ್ಯಾತ್ಮಕ ಸ್ತೋತ್ರಗಳ ರೂಪದಲ್ಲಿ ದಾಖಲಿಸಲಾಗಿದೆ. ಗುರು ನಾನಕ್ ಅವರ ಪಾವಿತ್ರ್ಯತೆ, ದೈವತ್ವ ಮತ್ತು ಧಾರ್ಮಿಕ ಅಧಿಕಾರವು ಅವರ ನಂತರದ ಒಂಬತ್ತು ಗುರುಗಳ ಮೇಲೆ ಪ್ರವಹಿಸಿದೆ ಎಂಬುದು ಸಿಖ್ ಧಾರ್ಮಿಕ ನಂಬಿಕೆಯ ಒಂದು ಭಾಗವಾಗಿದೆ.
The event was attended by about 170 dignitaries from the fields of politics, business, academia and the Indian community. @cgisydney @cgimelbourne @HCICanberra @MEAIndia @IndianDiplomacy pic.twitter.com/wVTwO8J8ax
— India in Perth (@CGIPerth) August 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.