ನವದೆಹಲಿ: ಭಾರತೀಯ ಸೇನೆಯು ಮಾನವ ಹಕ್ಕುಗಳ ವಿಶೇಷ ವಿಭಾಗವನ್ನು ರಚನೆ ಮಾಡಲು ನಿರ್ಧರಿಸಿದ್ದು, ಮೇಜರ್ ಜನರಲ್ ಶ್ರೇಣಿಯ ಹೆಚ್ಚುವರಿ ಪ್ರಧಾನ ನಿರ್ದೇಶಕರ ನೇತೃತ್ವದಲ್ಲಿ ಈ ವಿಭಾಗ ಇರಲಿದೆ. ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಈ ವಿಭಾಗ ವಹಿಸಲಿದೆ.
ಸೇನಾ ಪ್ರಧಾನ ಕಚೇರಿಯ ಮರುಸಂಘಟನೆಗೆ ಸಂಬಂಧಿಸಿದಂತೆ ಕೈಗೊಂಡ ಹಲವಾರು ನಿರ್ಧಾರಗಳ ಭಾಗವಾಗಿ ಮಾನವ ಹಕ್ಕುಗಳ ವಿಭಾಗವನ್ನು ರಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
“ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಲು ವೈಸ್ ಚೀಫ್ ಆಫ್ ಆರ್ಮಿ ಅಡಿಯಲ್ಲಿ ಮಾನವ ಹಕ್ಕುಗಳ ವಿಭಾಗವನ್ನು ತರಲಾಗುತ್ತದೆ. ಮಾನವ ಹಕ್ಕುಗಳ ಮತ್ತು ಮೌಲ್ಯಗಳ ಆಚರಣೆಗೆ ಹೆಚ್ಚಿನ ಆದ್ಯತೆ ನೀಡುವತ್ತ ಇದು ಗಮನ ಹರಿಸಲಿದೆ. ಮೇಜರ್ ಜನರಲ್ ರ್ಯಾಂಕ್ ಆಫೀಸರ್ ನೇತೃತ್ವದಲ್ಲಿ ವಿಶೇಷ ಮಾನವ ಹಕ್ಕುಗಳ ವಿಭಾಗವನ್ನು ನೇರವಾಗಿ ಸ್ಥಾಪಿಸಲು ನಿರ್ಧರಿಸಲಾಗಿದೆ” ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಯಾವುದೇ ಮಾನವ ಸಂಪನ್ಮೂಲ ಉಲ್ಲಂಘನೆ ವರದಿಗಳನ್ನು ಪರಿಶೀಲಿಸುವುದು ಪ್ರಮುಖ ಆಗಿರುತ್ತದೆ. ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಉತ್ತಮ ತನಿಖಾ ಪರಿಣತಿಯು ವಿಭಾಗಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಲು, ಎಸ್ಎಸ್ಪಿ / ಎಸ್ಪಿ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ಡೆಪ್ಯುಟೇಶನ್ ಮೇಲೆ ತೆಗೆದುಕೊಳ್ಳಲಾಗುತ್ತದೆ” ಎಂದು ಪ್ರಕಟನೆ ತಿಳಿಸಿದೆ.
ಕಾಶ್ಮೀರ ಮತ್ತು ಈಶಾನ್ಯದಂತಹ ಸಂಘರ್ಷವಿರುವ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಮಹತ್ವಪಡೆದುಕೊಂಡಿದೆ.
ಚೀಫ್ ಆಫ್ ಆರ್ಮಿ ಸ್ಟಾಫ್ (ಸಿಒಎಎಸ್) ಅಡಿಯಲ್ಲಿ ಸ್ವತಂತ್ರ ವಿಜಿಲೆನ್ಸ್ ಸೆಲ್ ಅನ್ನು ಸಹ ಕಾರ್ಯಾಚರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.